Recent Posts

Monday, January 20, 2025
ಸುದ್ದಿ

ಸಂಬಂಧ ಸಕ್ರಮಗೊಳಿಸಿದ ಅನುಷ್ಕಾ – ಕೊಹ್ಲಿ | ಇಟಲಿಯಲ್ಲಿ ಮಾಂಗಲ್ಯಂ ತಂತುನಾನೇನ

 

ಹೊಸದಿಲ್ಲಿ : ಬಹು ಕಾಲದ ನಿರೀಕ್ಷೆ, ಕುತೂಹಲ, ಊಹಾಪೋಹಗಳಿಗೆ ಕೊನೆಗೂ ತೆರೆ ಎಂಬಂತೆ ಭಾರತೀಯ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ಬಾಲಿವುಡ್‌ ತಾರೆ ಅನುಷ್ಕಾ ಶರ್ಮಾ ಇಂದು ಸೋಮವಾರ ಬೆಳಗ್ಗೆ ಇಟಲಿಯ ಟಸ್‌ಕ್ಯಾನಿಯಲ್ಲಿ ಖಾಸಕಿ ಸಮಾರಂಭದಲ್ಲಿ ವಿವಾಹ ಬಂಧನಕ್ಕೆ ಒಳಪಟ್ಟರೆಂದು ಮಾಧ್ಯಮ ವರದಿಗಳು ತಿಳಿಸಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಡಿಸೆಂಬರ್‌ ತಿಂಗಳಲ್ಲಿ ತನಗೆ ಬಿಡುವು ಬೇಕೆಂದು ವಿರಾಟ್‌ ಕೊಹ್ಲಿ ಅವರು ಬಿಸಿಸಿಐ ಮುಂದೆ ಮನವಿಯನ್ನು ಸಲ್ಲಿಸಿದಾಗಲೇ “ವಿರಾಟ್‌ – ಅನುಷ್ಕಾ’ (ವಿರುಷ್ಕಾ) ಮದುವೆಯ ಊಹಾಪೋಹಗಳು ಗರಿಗೆದರಿದ್ದವು. ಈ ಜೋಡಿ ಇಟಲಿಯ ಮಿಲಾನ್‌ನಲ್ಲಿ ಮದುವೆಯಾಗುತ್ತದೆ ಎಂಬ ವದಂತಿಗಳು ದಟ್ಟವಾಗಿ ಹರಡಿದ್ದವು. ಈ ವದಂತಿ ಕೊನೆಗೂ ನಿಜವಾಗಿ ಈ ವರೆಗಿನ ಎಲ್ಲ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೆಲ ದಿನಗಳ ಹಿಂದೆ ಅನುಷ್ಕಾ ಶರ್ಮಾ ಮತ್ತು ಅವರ ಕುಟುಂಬ ಸದಸ್ಯರನ್ನು ಮುಂಬಯಿ ವಿಮಾನ ನಿಲ್ದಾಣದಲ್ಲಿ ಕುತೂಹಲಿಗರು ಪತ್ತೆ ಹಚ್ಚಿದ್ದರು.

ಅದೇ ಸಂದರ್ಭದಲ್ಲಿ ಮಾಧ್ಯಮ ವರದಿಗಾರರು ಅನುಷ್ಕಾ ಅವರನ್ನು ಸುತ್ತುವರಿದು ಮದುವೆ ವದಂತಿ ಕುರಿತು ಸ್ಪಷ್ಟನೆ ಕೇಳಿದಾಗ ಆಕೆ ತುಟಿ ಬಿಚ್ಚಿರಲಿಲ್ಲ ! ಅನುಷ್ಕಾ ಜತೆಗೆ ಆಕೆಯ ಸಹೋದರ ಕರಣೇಶ್‌, ತಂದೆ ಅಜಯ್‌ ಕುಮಾರ್‌ ಶರ್ಮಾ ಮತ್ತು ತಾಯಿ ಆಶಿಮಾ ಕೂಡ ಇದ್ದರು.

Leave a Response