Monday, January 20, 2025
ರಾಜಕೀಯಸುದ್ದಿ

ಮೋದಿ ಟ್ವೀಟ್‍ಗೆ ರಮ್ಯ ತಿರುಗೇಟು – ಕಹಳೆ ನ್ಯೂಸ್

ಬುಧವಾರ ದಿಲ್ಲಿಯಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಮೋದಿ, “ರಾಹುಲ್ ಗಾಂಧಿಯವರ ತಂದೆ, ಮಾಜಿ ಪ್ರಧಾನಿ ರಾಜೀವ್ ಗಾಂದಿಯವರು ಐಎನ್‍ಎಸ್ ವಿರಾಟ್ ಯುದ್ಧನೌಕೆಯನ್ನು 1987ರಲ್ಲಿ ವೈಯಕ್ತಿಕ ಟ್ಯಾಕ್ಸಿಯಾಗಿ ಕುಟುಂಬದ ಜತೆ ವಿಹಾರಕ್ಕೆ ಬಳಸಿದ್ದರು” ಎಂದು ಆಪಾದಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ಈ ಅಪಾದನೆಗೆ ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ದಿವ್ಯಸ್ಪಂದನಾ ತಿರುಗೇಟು ನೀಡಿ ಟ್ವೀಟ್ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತದ ಯುದ್ಧನೌಕೆಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕುಟುಂಬದ ಜತೆ ವಿಹಾರಯಾನ ಕೈಗೊಂಡಿದ್ದರು ಎಂಬ ಆರೋಪಕ್ಕೆ ತಿರುಗೇಟು ನೀಡಲು ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ದಿವ್ಯಸ್ಪಂದನಾ ಐಎನ್‍ಎಸ್ ಸುಮಿತ್ರಾದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಪ್ರಯಾಣಿಸುತ್ತಿರುವ ಫೋಟೊ ಪೋಸ್ಟ್ ಮಾಡಿದ್ದಾರೆ.

”ಐಎನ್‍ಎಸ್ ಸುಮಿತ್ರಾದಲ್ಲಿ ಕೆನಡಾ ಪ್ರಜೆ ಪ್ರಯಾಣಿಸಬಹುದೇ” ಎಂದು ಮೋದಿಯನ್ನು ಕುಟುಕಿದ್ದಾರೆ.
ಪ್ರಧಾನಿ ಮೋದಿ, ನೀವು ಕೆನಡಾ ಪ್ರಜೆ ಅಕ್ಷಯ್ ಕುಮಾರ್ ಅವರನ್ನು ಐಎನ್‍ಎಸ್ ಸುಮಿತ್ರಾದಲ್ಲಿ ಜತೆಗೆ ಕರೆದೊಯ್ದಿದ್ದೀರಿ ಎಂದು ಟ್ವೀಟ್ ಮಾಡಿರುವ ಅವರು, ಇದನ್ನು ಪ್ರಧಾನಿ ಹಾಗೂ ಅಕ್ಷಯ್ ಕುಮಾರ್‌ಗೆ ಟ್ಯಾಗ್ ಮಾಡಿದ್ದಾರೆ.

“ಬಹುತೇಕ ನಾವು ಯಾರೂ ಈ ವಿವಾದವನ್ನು ಮರೆತಿಲ್ಲ” ಎಂದು 2016ರಲ್ಲಿ ನಡೆದ ಘಟನೆಯನ್ನು ಟೀಕಿಸಿದ ಲೇಖನವನ್ನು ಉಲ್ಲೇಖಿಸಿದ್ದಾರೆ.

ಇದನ್ನು ಬಲವಾಗಿ ಅಲ್ಲಗಳೆದ ಕಾಂಗ್ರೆಸ್, ನಿವೃತ್ತ ವೈಸ್ ಅಡ್ಮಿರಲ್ ವಿನೋದ್ ಪರ್ಸೀಚಾ ಅವರ ಹೇಳಿಕೆಯನ್ನು ಉಲ್ಲೇಖಿಸಿತ್ತು. ರಾಜೀವ್ ಗಾಂಧಿ ಅಧಿಕೃತ ಭೇಟಿಗಾಗಿ ಐಎನ್‍ಎಸ್ ವಿರಾಟ್‍ನಲ್ಲಿ ಯಾನ ಕೈಗೊಂಡಿದ್ದರೇ ವಿನಃ ವಿಹಾರಕ್ಕಾಗಿ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.