Recent Posts

Monday, January 20, 2025
ಸಿನಿಮಾಸುದ್ದಿ

ರಾಖಿ ಸಾವಂತ್ ಮೈ ಮೇಲೆ ಪಾಕ್ ಫ್ಲ್ಯಾಗ್..! – ಕಹಳೆ ನ್ಯೂಸ್

ಮುಂಬೈ: ಬಾಲಿವುಡ್‍ನ ಹಾಟ್ ಬ್ಯೂಟಿ ಅಂಡ್ ಕಾಂಟ್ರವರ್ಸಿ ನಟಿ ರಾಖಿ ಸಾವಂತ್ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಮುಂಬರುವ ಸಿನಿಮಾದಲ್ಲಿ ಬ್ಯುಸಿಯಾಗಿರುವ ರಾಖಿ ಸಾವಂತ್, ಅದೇ ಚಿತ್ರದಲ್ಲಿನ ಸೀನ್‍ವೊಂದನ್ನ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಮೈಮೇಲೆ ಪಾಕಿಸ್ತಾನದ ಫ್ಲ್ಯಾಗ್ ಹೊದ್ದು ನಿಂತಿದ್ದು, ನಾನು ನನ್ನ ಭಾರತ ದೇಶವನ್ನ ಪ್ರೀತಿಸುತ್ತೇನೆ. ಇದು ಸಿನಿಮಾ ‘‘ ಧಾರಾ 370’ ಯಲ್ಲಿನ ಪಾತ್ರ ಎಂದು ಟ್ವೀಟ್ ಮಾಡಿದ್ದಾರೆ.

ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಜನರು ರಾಖಿ ವಿರುದ್ಧ ಮುಗಿಬಿದ್ದಿದ್ದಾರೆ. ಕೆಲವರು ನೀವು ಪಾಕಿಸ್ತಾನಿ ನಾಗರಿಕತ್ವಕ್ಕೆ ಸೂಟ್ ಆಗ್ತೀರಾ ಅಂತ ಕಾಲೆಳೆದಿದ್ರೆ, ಇನ್ನು ಕೆಲವರು ಮಿಸ್ ರಾಖಿ ಪಾಕಿಸ್ತಾನಿ ಸಾವಂತ್ ಅಂತ ಗೇಲಿ ಮಾಡಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಈ ಫೋಟೋ ಇಷ್ಟೆಲ್ಲ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಎಚ್ಚೆತ್ತ ರಾಖಿ ಸಾವಂತ್, ವಿಡಿಯೋ ಮೂಲಕ ಇದಕ್ಕೆಲ್ಲ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ‘‘ಧಾರಾ 370’ ಸಿನಿಮಾದಲ್ಲಿ ಪಾಕಿಸ್ತಾನಿ ಹುಡುಗಿಯಾಗಿ ನಟಿಸುತ್ತಿದ್ದೇನೆ. ಇದಕ್ಕೆಲ್ಲ ಬೇರೆ ಬಣ್ಣ ಬಳಿಬೇಡಿ ಎಂದು ವಿನಂತಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಲ್ಲದೇ, ಎಲ್ಲ ಪಾಕಿಸ್ತಾನ ಪ್ರಜೆಗಳು ಕೆಟ್ಟವರಲ್ಲ. ಕೆಲ ಜನರು ಕೆಟ್ಟ ಹಾದಿ ಹಿಡಿದಿರುತ್ತಾರೆ. ಹಾಗಂತ ಎಲ್ಲರನ್ನ ಕೆಟ್ಟವರು ಅಂತ ಅನ್ನೋಕಾಗುತ್ತಾ ಅಂತ ಪ್ರಶ್ನಿಸಿದ್ದಾರೆ. ಜೊತೆಗೆ ಪಾಕಿಸ್ತಾನದ ಜನತೆಯನ್ನ ನಾನು ಗೌರವಿಸುತ್ತೇನೆ ಅಂತ ಶೂಟಿಂಗ್ ಸ್ಪಾಟ್‍ನಿಂದಲೇ ವಿಡಿಯೋ ಶೇರ್ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು