ಬಿಸಿಸಿಐ ಹಾಗು ರಾಜ್ಯ ಕ್ರಿಕೆಟ್ ಸಂಘಗಳು ಆಯೋಜಿಸಿರುವ ಐಪಿಎಲ್ ಫ್ಯಾನ್ ಪಾರ್ಕ್ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಲಿದೆ. ಇಂದು ರಾತ್ರಿ 7:30ಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯುವ 2ನೇ ಕ್ವಾಲಿಫಯರ್ ಪಂದ್ಯದ ನೇರ ಪ್ರಸಾರ ಆಯೋಜಿಸಲಾಗಿದೆ ಎಂದು ಬಿಸಿಸಿಐ ಪ್ರತಿನಿಧಿ ಪ್ರಶಾಂತ್ ಮಹಡಿ ತಿಳಿಸಿದ್ದಾರೆ.
32/18 ಸ್ಕ್ರೀನ್‍ನಲ್ಲಿ ಪಂದ್ಯ ಪ್ರಸಾರಗೊಳ್ಳಲಿದ್ದು, ಸುಮಾರು 7000 ಜನ ಭಾಗವಹಿಸುವ ನಿರೀಕ್ಷೆ ಇದೆ. ದೇಶದಾದ್ಯಂತ ಒಟ್ಟು 36 ನಗರಗಳಲ್ಲಿ ಫ್ಯಾನ್ ಪಾರ್ಕ್ ಆಯೋಜನೆ ಮಾಡಲಾಗಿದೆ. ಸಂಜೆ 6ಕ್ಕೆ ಪ್ರವೇಶ ಆರಂಭವಾಗಲಿದ್ದು ಮತ್ತು ಪ್ರವೇಶ ಉಚಿತವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿದು ಬಂದಿದೆ.