Monday, January 20, 2025
ಸುದ್ದಿ

ಇವಿಎಂಗೂ ಇಲಿ ಕಾಟವೇ.! – ಕಹಳೆ ನ್ಯೂಸ್

ಉತ್ತರ ಪ್ರದೇಶ: ಸ್ಟ್ರಾಂಗ್ ರೂಂಗಳಲ್ಲಿ ಇಟ್ಟಿರುವ ಲೋಕಸಭೆ ಚುನಾವಣೆಯಲ್ಲಿ ಬಳಕೆಯಾದ ಇವಿಎಂ ಮಷಿನ್‍ಗಳಿಗೆ ಇಲಿಗಳು ವಿಲನ್ ಆಗಿ ಕಾಡ್ತಿವೆಯಾ? ಹೌದು ಕಾಡ್ತಿವೆ, ಇಲಿಗಳಿಂದ ಇವಿಎಂಗಳಿಗೆ ರಕ್ಷಣೆ ನೀಡಬೇಕು ಅಂತಾ ಸ್ವತಃ ಅಭ್ಯರ್ಥಿಯೊಬ್ಬರು ಚುನಾವಣಾ ಆಯೋಗದ ಮೊರೆಹೋಗಿದ್ದಾರೆ.

ಅಲ್ಲದೆ ಸ್ಟ್ರಾಂಗ್ ರೂಮ್‍ನ ಸುತ್ತ ಜಾಲರಿಯನ್ನು ಅಳವಡಿಸಬೇಕು ಎಂದು ಆಗ್ರಹಿಸಿದ್ದಾರೆ. ಆದರೆ ಅಭ್ಯರ್ಥಿಯ ಈ ವಾದವನ್ನು ತಳ್ಳಿಹಾಕಿರುವ ಸ್ಥಳೀಯ ಚುನಾವಣಾಧಿಕಾರಿ ಇವಿಎಂಗಳಿಗೆ ಇಲಿಕಾಟ ಇಲ್ಲ ಎಂದ್ದಿದ್ದಾರೆ. ಅಂದಹಾಗೆ ಈ ಘಟನೆ ನಡೆದಿರೋದು ಉತ್ತರಪ್ರದೇಶದ ಮಥುರಾ ಕ್ಷೇತ್ರದಲ್ಲಿ, ಇಲ್ಲಿ ಚುನಾವಣೆ ಮುಗಿದ ಬಳಿಕ , ಇವಿಎಂಗಳನ್ನು ಇಲ್ಲಿನ ಮಂಡಿ ಸಮಿತಿ ಪ್ರದೇಶದದಲ್ಲಿರುವ ಕಟ್ಟಡದಲ್ಲಿ ಇಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ, ಅಲ್ಲಿ ಸ್ಪರ್ಧಿಸಿದ್ದ ರಾಷ್ಟ್ರೀಯ ಲೋಕದಳದ ಅಭ್ಯರ್ಥಿ ನರೇಂದ್ರ ಸಿಂಗ್, ಈ ಪ್ರದೇಶದಲ್ಲಿ ಇಲಿಕಾಟ ಹೆಚ್ಚಿದ್ದು, ಇವಿಎಂಗಳಿಗೆ ಇದರಿಂದ ಧಕ್ಕೆಯಾಗುವ ಸಾಧ್ಯತೆ ಇದ್ದು ದಯವಿಟ್ಟು, ಕಟ್ಟಡದ ಸುತ್ತ ಜಾಲರಿಗಳನ್ನು ಹಾಕಿಸಬೇಕು ಎಂದು ಆಗ್ರಹಿಸಿದ್ರು. ಆದರೆ ಅಭ್ಯರ್ಥಿಯ ವಾದವನ್ನು ಅಲ್ಲಗಳೆದಿರುವ ಜಿಲ್ಲಾ ಮ್ಯಾಜಿಸ್ಟ್ರೇಟ್ ಸರ್‍ವಾಗ್ಯಾ ರಾಮ್ ಮಿಶ್ರಾ, ಇವಿಎಂಗೆ ಇಲಿಗಳಿಂದ ತೊಂದರೆಯಿಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು