Tuesday, January 21, 2025
ಸುದ್ದಿ

ಫನಿ ಅಬ್ಬರದ ಬಳಿಕ ಒಡಿಶಾಕ್ಕೆ ಇನ್ನೊಂದು ಹೊಡೆತ – ಕಹಳೆ ನ್ಯೂಸ್

ಫನಿ ಚಂಡಮಾರುತದ ಅಭ್ಬರಕ್ಕೆ ಒಡಿಶಾ ಕರಾವಳಿಯ ಜನಜೀವನ ಅಲ್ಲೋಲ ಕಲ್ಲೋಲವಾಗಿದ್ದು ಸುಳ್ಳಲ್ಲ. ಚಂಡಮಾರುತದ ಘೋರ ನರ್ತನ ಮುಗಿದ ಬಳಿಕವೂ ಈ ಭಾಗದ 14 ದಶಲಕ್ಷ ಮಂದಿ ಯಮಯಾತನೆ ಪಡುವಂತಾಗಿದೆ. ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿದೆ, ಜೀವನ ದುಸ್ತರವಾಗಿದೆ. ಬಹುತೇಕ ಕಡೆಗಳಲ್ಲಿ ಇನ್ನೂ ವಿದ್ಯುತ್ ಇಲ್ಲ. ಮೊಬೈಲ್ ಫೋನ್ ಸಂಪರ್ಕ ಕೂಡಾ ಸೀಮಿತವಾಗಿದ್ದು, ಎಟಿಎಂಗಳು ಬರಿದಾಗಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗುರುವಾರ ಡೀಸೆಲ್ ಜನರೇಟರ್ ಸಹಾಯದಿಂದ ಚಾಲಿತವಾಗಿದ್ದ ಎಟಿಎಂ ಹೊರಗೆ ದೊಡ್ಡ ಸರದಿಸಾಲು ಕಂಡುಬಂತು. ಆದರೆ ಡೀಸೆಲ್ ಕೂಡಾ ಸಾಕಷ್ಟು ಲಭ್ಯವಿಲ್ಲದ ಕಾರಣ ಜನರೇಟರ್‍ಗಳನ್ನು ಕೂಡಾ ದೀರ್ಘ ಅವಧಿಗೆ ಬಳಸುವಂತಿಲ್ಲ. ಡೀಸೆಲ್ ಹಾಗೂ ಪೆಟ್ರೋಲ್ ಅಭಾವದ ಹಿನ್ನೆಲೆಯಲ್ಲಿ ಪುರಿಯಲ್ಲಿ ಪೆಟ್ರೋಲ್ ಪಂಪ್‍ಗಳು ಕೇವಲ 5-6 ಗಂಟೆ ಮಾತ್ರ ಕಾರ್ಯನಿರ್ವಹಿಸುತ್ತಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ 20 ವರ್ಷಗಳಲ್ಲೇ ಅತ್ಯಂತ ಭೀಕರ ಎನ್ನಲಾದ ಚಂಡಮಾರುತದಿಂದ ರಾಜ್ಯದ ಮೂರನೇ ಒಂದರಷ್ಟು ಬೆಳೆ ನಾಶವಾಗಿದೆ ಹಾಗೂ ಸಾಕಷ್ಟು ಸಾಕುಪ್ರಾಣಿಗಳು ಜೀವ ಕಳೆದುಕೊಂಡಿವೆ. 21.75 ಲಕ್ಷ ಕೋಳಿಗಳು ಬಲಿಯಾಗಿವೆ ಎಂದು ಒಡಿಶಾದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಕಾರ್ಯದರ್ಶಿ ಸಂಜಯ್ ಕುಮಾರ್ ಸಿಂಗ್ ಹೇಳಿದ್ದಾರೆ.
14 ಜಿಲ್ಲೆಗಳ 88 ತಾಲೂಕುಗಳಲ್ಲಿ 1.53 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ. ಇದರಿಂದ ಸುಮಾರು 145 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ವಿವರಿಸಿದ್ದಾರೆ.