Monday, January 20, 2025
ಸುದ್ದಿ

ಸಾಮರಸ್ಯಕ್ಕೆ ಕಲ್ಲು | ಪರಂಗಿಪೇಟೆಯಲ್ಲಿ ಕೆ.ಎಸ್.ಆರ್.ಟಿ. ಬಸ್ಸು ಜಖಂ !

 

ಮಂಗಳೂರು: ಸಚಿವ ರಮನಾಥ ರೈ ಅವರ ನೇತೃತ್ವದಲ್ಲಿ ವಿವಿಧ ಜಾತ್ಯಾತೀತ ಪಕ್ಷಗಳು ಸಾಮರಸ್ಯದ ನಡಿಗೆ ಸೌಹಾರ್ದದೆಡೆಗೆ ಎಂಬ ಕಾಲ್ನಡಿಗೆ ಜಾಥ ನಡೆಸಲುದ್ದೇಶಿಸಿದರೆ ದುಷ್ಕರ್ಮಿಗಳು ಬಸ್ಸಿಗೆ ಕಲ್ಲು ತೂರಾಟ ನಡೆಸಿದ ಘಟನೆ ಫರಂಗಿಪೇಟೆಯಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಂಜಾನೆ ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ರಾಜಹಂಸ ಮತ್ತು ಕೆ ಎಸ್ ಆರ್ ಟಿ ಸಿ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಲ್ಲಿ ಬಸ್ಸಿಗೆ ಹಾನಿಯಾಗಿದ್ದು ಪ್ರಯಾಣಿಕರು ಪಾರಾಗಿದ್ದಾರೆ.
ಇಂದು ಆಯೋಜಿಸಿರುವ ಸಾಮರಸ್ಯದ ನಡಿಗೆ ಸೌಹಾರ್ದದೆಡೆಗೆ ಎಂಬ ಕಾಲ್ನಡಿಗೆ ಜಾಥದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಈ ಕೃತ್ಯ ನಡೆಸಿದ್ದಾರೆ.
ಸಾಮರಸ್ಯದ ನಡಿಗೆ ಸೌಹಾರ್ದದೆಡೆಗೆ ಎಂದು ನಡೆಯುವ ಕಾಲ್ನಡಿಗೆ ಜಾಥ ಫರಂಗಿಪೇಟೆಯಿಂದ ಮಾಣಿಯವರೆಗೆ ನಡೆಯಲಿದ್ದು ಕಾಂಗ್ರೆಸ್, ಸಿಪಿಐ, ಸಿಪಿಎಂ , ದಲಿತ ಸಂಘಟನೆಗಳು , ತುಳುನಾಡ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ಪಾಲ್ಗೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response