Recent Posts

Monday, January 20, 2025
ಸಿನಿಮಾಸುದ್ದಿ

ಆಗ ರಾಕಿ ಭಾಯ್ ಹವಾ, ಈಗ ರಾಕಿ ಬೇಬಿದ್ದೇ ಹವಾ!! – ಕಹಳೆ ನ್ಯೂಸ್

ಹೌದು ಮೊನ್ನೆವರೆಗೂ ಯಶ್ ರಾಧಿಕಾ ದಂಪತಿ ತಮ್ಮ ಮುದ್ದಿನ ಮಗಳ ಯಾವುದೇ ಒಂದು ಫೊಟೋವನ್ನು ಕೂಡ ರಿವೀಲ್ ಮಾಡಿರಲಿಲ್ಲ. ಅದಾದ್ಮೇಲೆ ಅದಕ್ಕೆಂದೇ ಒಂದು ದಿನ ಫಿಕ್ಸ್ ಮಾಡಿ ತಮ್ಮ ಮುದ್ದು ಮಗಳ ಮುದ್ದಾದ ಫೊಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ರು. ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿರುವ ಯಶ್‍ರಂತೆ ಮಗಳೂ ಅಪ್ಪನಿಗೆ ಕಮ್ಮಿ ಇಲ್ಲ ಎಂಬಂತೆ, ಕರ್ನಾಟಕದಲ್ಲಿ ಅತೀ ಹೆಚ್ಚು ವೀಕ್ಷಿಸಲ್ಪಟ್ಟ ಟ್ವೀಟ್ ಫೊಟೋ ಎಂಬ ಹೆಗ್ಗಳಿಕೆಯನ್ನು ಯಶ್ ಮಗಳು ಪಡೆದುಕೊಂಡಿದ್ದಾಳೆ.

ಆದರೆ ಇನ್ನೂ ತಮ್ಮ ಮಗಳಿಗೆ ನಾಮಕರಣ ಮಾಡದ ಯಶ್ ದಂಪತಿ ಇದೀಗ ಮಗಳೊಂದಿಗಿನ ಇನ್ನೊಂದು ಅದ್ಭುತ ಕ್ಷಣವನ್ನು ಎಲ್ಲರ ಜೊತೆ ಹಂಚಿಕೊಂಡಿದ್ದಾರೆ. ಈ ಫೊಟೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ. ಯಶ್ ಅಭಿಮಾನಿಗಳು ಈ ಫೊಟೋವನ್ನೇ ತಮ್ಮ ಡಿಪಿ, ಪ್ರೊಫೈಲ್ ಪಿಕ್ಚರ್ ಆಗಿ ಬದಲಾಯಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು