Recent Posts

Monday, January 20, 2025
ಸಿನಿಮಾಸುದ್ದಿ

‘ನಿಖಿಲ್ ಎಲ್ಲಿದ್ದಿಯಪ್ಪಾ’ ಸಿನಿಮಾಗೆ ನಿಖಿಲ್ಲೇ ಹೀರೋ!! – ಕಹಳೆ ನ್ಯೂಸ್

ಜಾಗ್ವಾರ್ ಚಿತ್ರದ ಧ್ವನಿಸುರುಳಿ ಸಮಾರಂಭದಲ್ಲಿ ಕುಮಾರಸ್ವಾಮಿ ಮತ್ತು ನಿಖಿಲ್ ನಡುವೆ ನಡೆದ ಸಂಭಾಷಣೆಯು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದ ‘ನಿಖಿಲ್ ಎಲ್ಲಿದ್ದಿಯಪ್ಪಾ’ ನಂತರ ವಿದೇಶಿಗರ ಬಾಯಲ್ಲೂ ಕೇಳಲು ಆರಂಭವಾಯಿತು.

ಇಷ್ಟಾಗುವ ಹೊತ್ತಿಗೆ ಕರ್ನಾಟಕ ಫಿಲ್ಮ್ ಛೇಂಬರ್‌ನಲ್ಲಿ ‘ನಿಖಿಲ್ ಎಲ್ಲಿದ್ದಿಯಪ್ಪಾ’ ಹೆಸರಿನ ಟೈಟಲ್‍ಗೆ ಭಾರೀ ಬೆಡಿಕೆ ವ್ಯಕ್ತವಾಗಿತ್ತು. ನಿರ್ಮಾಪಕರು ನಾ ಮುಂದು ತಾ ಮುಂದು ಎಂದು ಟೈಟಲ್‍ಗೆ ಮುಗಿ ಬಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು ಈ ಬಗ್ಗೆ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ನಿಖಿಲ್ ‘ನಿಖಿಲ್ ಎಲ್ಲಿದ್ದಿಯಪ್ಪಾ’ ಟೈಟಲ್ ಇನ್ಯಾರಿಗೋ ಕೊಡೋದು ಬೇಡ ಅದು ನನ್ನ ಟೈಟಲ್ ನನಗೇ ಕೊಟ್ಟು ಬಿಡಿ ಎಂದು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಹೇಳಿಕೊಂಡಿದ್ದಾರಂತೆ. ಅದಕ್ಕೆ ಸರಿಯಾಗಿ ಮಾತನಾಡಿದ ಪುಟ್ಟರಾಜು ನಿಖಿಲ್ ಹೀರೋ ಆಗೋದಾದರೆ ನಾನೆ ಸಿನೆಮಾವನ್ನು ನಿರ್ಮಾಣ ಮಾಡುತ್ತೇನೆ ಎಂದು ಸಭೆಯಲ್ಲಿ ಘೋಷಣೆ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಮೆರಿಕದವರ ಬಾಯಲ್ಲೂ ‘ನಿಖಿಲ್ ಎಲ್ಲಿದ್ದಿಯಪ್ಪಾ’ ಎಂದು ಕೇಳಿರುವುದಕ್ಕೆ ನಿಖಿಲ್ ಸಂತಸ ವ್ಯಕ್ತಪಡಿಸಿದ್ದಾರೆ. ನನ್ನನ್ನು ಹೀಯಾಳಿಸುವುದಕ್ಕೆ ಹೀಗೆ ಮಾಡಿದರೂ, ಅದು ನನ್ನನ್ನು ದೇಶ ವಿದೇಶದಲ್ಲಿ ಪ್ರಖ್ಯಾತಿಗೊಳಿಸುವಂತೆ ಮಾಡಿತು ಎಂದು ಹೇಳಿದ್ದಾರೆ.