ಇತ್ತೀಚಿನ ದಿನಗಳವರೆಗೂ ಕನ್ನಡ ಚಿತ್ರರಂಗದಲ್ಲಿ ಕೆಲ ಪೂರ್ವಾಗ್ರಹ ಪೀಡಿತ ವ್ಯಕ್ತಿಗಳಿಂದ ಪರಭಾಷಾ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡಲು ತಡೆಯುಂಟು ಮಾಡುವ ಕೆಲಸ ಎಗ್ಗಿಲ್ಲದೇ ನಡೆಯುತ್ತಿತ್ತು. ತಮ್ಮ ತಂದೆ ಹೇಳಿದ್ದಾರೆ, ಹಾಗೆ ಹೀಗೆ ಎಂದು ಅವರ ವಯ್ಯಕ್ತಿಕ ನಿರ್ಧಾರವನ್ನು ಇಡೀ ಚಿತ್ರರಂಗದ ಮೇಲೆ ಹೇರುವ ಕಾರ್ಯ ಮಾಡುತ್ತಿದ್ದರು. ಆದರೆ ನಂತರದ ದಿನಗಳಲ್ಲಿ ಡಬ್ಬಿಂಗ್ ಪರ ಹೋರಟ ಜೋರಾಗಿದ್ದೇ ತಡ, ಕಾನೂನಾತ್ಮಕವಗಿ ಡಬ್ಬಿಂಗ್ ವಿರೋಧಿಸುವವರಿಗೆ ಶಿಕ್ಷೆ ಎಂದು ನ್ಯಾಯಾಲಯ ಘೋಷಣೆ ಮಾಡಿತು.
ಇದ್ರಿಂದಾಗಿ ಈ ಮಹಾನುಭಾವರೀಗ ಮೌನವಾಗಿದ್ದಾರೆ. ಇನ್ನೊಂದೆಡೆ ಪರ ಭಾಷೆಗಳಿಂದ ಕನ್ನಡಕ್ಕೆ ಡಬ್ ಆಗಿ ಸಿನೆಮಾಗಳು ಒಂದೊಂದಾಗಿ ಬಿಡುಗಡೆಯಾಗುತ್ತಿವೆ. ಪ್ರಮುಖವಾಗಿ ಅಜಿತ್ ನಟನೆಯ ವಿವೇಗಂ, ವಿಶ್ವಾಸಂ ಡಬ್ ಆಗಿ ಯಶಸ್ವಿ ಪ್ರದರ್ಶನಗಳನ್ನು ಕಂಡಿವೆ.
ಮಲಯಾಳಂನ ‘ಒರು ಅಡಾರ್ ಲವ್’ ಕನ್ನಡದಲ್ಲಿ ಕಿರಿಕ್ ಲವ್ ಸ್ಟೋರಿಯಾಗಿ ತೆರೆಕಂಡಿತ್ತು. ರಾಘವ ಲಾರೆನ್ಸ್ ರವರ ‘ಕಾಂಚನಾ 3’ ಅದೇ ಶೀರ್ಷಿಕೆಯಲ್ಲಿ ಬಿಡುಗಡೆಗೊಂಡಿದೆ. ಇನ್ನು ಕಳೆದ ವರ್ಷದ ಟಾಲಿವುಡ್ ಇಂಡಸ್ಟ್ರಿ ಹಿಟ್ ‘ರಂಗಸ್ಥಲಂ’ ರಂಗಸ್ಥಳವಾಗಿ ತೆರೆ ಮೇಲೆ ಬರಲು ಸಜ್ಜಾಗಿದೆ. ಜೊತೆಗೆ ವಿಶ್ವದಾದ್ಯಂತ 2 ಟ್ರೈಲರ್‍ಗಳಿಂದ ಸಿನಿರಸಿಕರನ್ನು ಬೆರಗು ಕಣ್ಣಿನಿಂದ ನೋಡುವಂತೆ ಮಾಡಿದ್ದ ‘ಹೋಬ್ಸ್ ಆ್ಯಂಡ್ ಷಾ’ ಟ್ರೈಲರ್ ಕನ್ನಡ ಹಾಗೂ ಭಾರತದ ಹಲವು ಭಾಷೆಗಳಲ್ಲಿ ಡಬ್ ಮಾಡಿ ರಿಲೀಸ್ ಮಾಡಲಾಗಿದೆ. ಕಳೆದ ಬಾರಿಯೂ ‘ಫಾಸ್ಟ್ ಆ್ಯಂಡ್ ಫ್ಯೂರಿಯಸ್ 8’ ಹಾಗೂ ‘ಮಿಷನ್ ಇಂಪಾಸಿಬಲ್ ಪ್ರಳಯ’ದ ಕನ್ನಡ ಟ್ರೈಲರ್ ಸದ್ದು ಮಾಡಿತ್ತಾದರೂ ಚಿತ್ರಮಂದಿರದಲ್ಲಿ ತೆರೆಕಾಣಲು ಸಾಧ್ಯವಾಗಿರಲಿಲ್ಲ.