ಕುಮಾರಸ್ವಾಮಿ ಆರೋಗ್ಯವಾಗಿದ್ದಾರೆ. ರೆಸಾರ್ಟ್ ಗೂ ಆರೋಗ್ಯಕ್ಕೂ ಏನು ಸಂಬಂಧ ಇಲ್ಲ, ಎರಡು ಸಾರಿ ವಿಶ್ರಾಂತಿಗೆ ಹೋಗಿದ್ದಾರೆ. ಅದನ್ನೇ ಮಾಧ್ಯಮದವರು ಪದೇ ಪದೇ ಅಂತೀರಾ..? ಅದು ಹೇಗೆ ಪದೇ ಪದೇ ಆಗುತ್ತೆ ಎಂದು ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಹೇಳಿದರು.
ಇವರು ತುಮಕೂರಿನಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ರೆಸಾರ್ಟ್ ವಾಸ್ತವ್ಯ ಹೊಡಿದ ಬಗ್ಗೆ ಪ್ರಶ್ನೆ ಕೇಳಿದಾಗ ಚುನಾವಣೆಯಲ್ಲಿ ದಣಿದಿದ್ದಾರೆ. ಪ್ರಚಾರಕ್ಕಾಗಿ ಓಡಾಡಿದ್ದಾರೆ. ನೀತಿ ಸಂಹಿತೆ ಇದೆ ಇದರಿಂದ ಸರಕಾರದಲ್ಲಿ ನಮ್ಮ ಕೆಲಸಗಳು ಕಡಿಮೆ ಇದೆ. ಹೀಗಾಗಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ರೆಸಾರ್ಟ್ ವಾಸ್ತವ್ಯ ಹೂಡಿದ್ದಾರೆ ಎಂದರು.