ಮೇ 5 ರಂದು ನಡೆದಿದ್ದ, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪ್ರವೇಶ ಪರೀಕ್ಷೆ ‘ನೀಟ್’ ಅನೇಕ ವಿದ್ಯಾರ್ಥಿಗಳ ಪಾಲಿಗೆ ತಪ್ಪಿಹೋಗಿತ್ತು, ಹಂಪಿ ಎಕ್ಸ್ ಪ್ರೆಸ್ ರೈಲು ವಿಳಂಬ ಮತ್ತು ಒಡಿಸ್ಸಾದಲ್ಲಿ ಫೋನಿ ಚಂಡಮಾರುತದಿಂದಾಗಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದಿದ್ದ ವಿದ್ಯಾರ್ಥಿಗಳಿಗೆ ಹಾಗೂ ಪಶ್ಚಿಮ ಬಂಗಾಳದ ಸಿಲಿಗುರಿಯ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶವನ್ನ ಸುಪ್ರೀಂಕೋರ್ಟ್ ನೀಡುತ್ತಿದೆ.
ಹೌದು, ಮೇ 20 ರಂದು ನೀಟ್ ಪರೀಕ್ಷೆ ನಡೆಸಲು ನ್ಯಾಯಮೂರ್ತಿಗಳಾದ ಎಸ್.ಎ.ಬೊಬ್ಬೆ ಹಾಗೂ ಎಸ್. ಅಬ್ದುಲ್ ನಜೀರ್ ನೇತೃತ್ವದ ಪೀಠವು ಒಪ್ಪಿಗೆ ನೀಡಿದೆ. ಇನ್ನು ಮೇ 5ಕ್ಕೆ ಹಾಗೂ 20ಕ್ಕೆ ನಡೆಯಲಿರುವ ಪರೀಕ್ಷೆಗಳ ಫಲಿತಾಂಶವನ್ನ ಒಟ್ಟಿಗೆ ಪ್ರಕಟಿಸಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಮೊರೆ ಹೋಗಲಾಗಿದೆ.
ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಕೇಂದ್ರ ಮಂತ್ರಿ ಸದಾನಂದಗೌಡ ಅವರುಗಳು ಮಾನವ ಸಂಪನ್ಮೂಲ ಇಲಾಖೆ ಮತ್ತು ಪ್ರಧಾನಿಯನ್ನು ನೀಟ್ ಪರೀಕ್ಷೆ ತಪ್ಪಿಸಿಕೊಂಡ ರಾಜ್ಯದ ವಿದ್ಯಾರ್ಥಿಗಳಿಗೆ ಮರುಪರೀಕ್ಷೆಗೆ ಅವಕಾಶ ಕೊಡಬೇಕೆಂದು ಒತ್ತಾಯ ಮಾಡಿದ್ದರು, ಅಂತೆಯೇ ಕೇಂದ್ರ ಮಂತ್ರಿಗಳು ಅವಕಾಶ ಕೊಡುವ ಭರವಸೆ ನೀಡಿದ್ದರು.
ಅಷ್ಟೆ ಅಲ್ಲದೆ, ಸುಪ್ರಿಂ ಕೋರ್ಟ್‍ನಲ್ಲಿ ಸಹ ಈ ಬಗ್ಗೆ ಪ್ರಕರಣದ ದಾಖಲಿಸಲಾಗಿತ್ತು, ಅದರ ವಿಚಾರಣೆ ಇಂದು ಪೂರ್ಣವಾಗಿ ತಮ್ಮದಲ್ಲದ ತಪ್ಪಿಗೆ ಪರೀಕ್ಷೆ ಎದುರಿಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಮರುಪರೀಕ್ಷೆಗೆ ಅವಕಾಶ ಕೊಡಬೇಕು ಎಂದು ಸುಪ್ರಿಂ ಸಹ ಹೇಳಿತ್ತು.