Monday, January 20, 2025
ರಾಜಕೀಯಸುದ್ದಿ

ಅಂಕಲ್‍ಗೆ ಕ್ಷಮೆ ಕೇಳಲು ಫೇಸ್‍ಬುಕ್ ಪೋಸ್ಟ್ ಹಾಕಿದ ರಾಹುಲ್ ಗಾಂಧಿ – ಕಹಳೆ ನ್ಯೂಸ್

ನವದೆಹಲಿ: 1984ರ ಸಿಖ್ ವಿರೋಧಿ ದಂಗೆ ಬಗ್ಗೆ ಆಗಿದ್ದು ಆಯ್ತು ಅಂತಾ ಸರಳವಾಗಿ ಹೇಳಿದ ಕಾಂಗ್ರೆಸ್ ಪಕ್ಷದ ಸಾಗರೋತ್ತರ ಘಟಕದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಹೇಳಿದ್ದನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಖಂಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರಿಂದ ಭಾರೀ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ರಾಹುಲ್ ಗಾಂಧಿ ತಮ್ಮ ಪಕ್ಷದ ಮುಖಂಡನ ಮಾತನ್ನು ಖಂಡಿಸಿದ್ದಾರೆ. ಪಿತ್ರೋಡಾ ನೀಡಿರುವ ಹೇಳಿಕೆ ಹದ್ದು ಮೀರಿದ್ದಾಗಿದೆ. ಕಾಂಗ್ರೆಸ್ ಪಕ್ಷಕ್ಕೂ ಪಿತ್ರೋಡಾರ ಹೇಳಿಕೆಗೂ ಯಾವುದೇ ಸಂಬಂಧವಿಲ್ಲ. ಅವರು ತಾವು ನೀಡಿರೋ ಹೇಳಿಕೆಗೆ ಕ್ಷಮೆ ಕೇಳಬೇಕು ಎಂದಿದ್ದಾರೆ. ಸಿಖ್ ನರಮೇಧ ನಡೆದ ಸಂದರ್ಭದಲ್ಲಿ ಅನೇಕರು ನೋವಿಗೆ ತುತ್ತಾಗಿದ್ದಾರೆ. ಹೀಗಿರುವಾಗ ಸ್ಯಾಮ್ ಪಿತ್ರೋಡಾರ ಹೇಳಿಕೆ ಮತ್ತಷ್ಟು ಘಾಸಿಗೊಳಿಸುವಂತಿದ್ದು ಕೂಡಲೇ ಅವರು ಕ್ಷಮೆ ಕೇಳಬೇಕು ಎಂದು ಸೂಚಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ಫೇಸ್‍ಬುಕ್‍ನಲ್ಲಿ ಪೋಸ್ಟ್ ವೊಂದನ್ನು ಹಾಕಿರುವ ರಾಹುಲ್ ಹಿಂದೆ ನಡೆದ ಘಟನೆ ಭವಿಷ್ಯದಲ್ಲಿ ಎಂದು ನಡೆಯಬಾರದು, ಘಟನೆಯ ಕಾರಣಕರ್ತರಿಗೆ ತಕ್ಕ ಶಿಕ್ಷೆ ಆಗಬೇಕು ಎಂದಿದ್ದಾರೆ. ಅಲ್ಲದೆ ಈ ಬಗ್ಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಷಾದ ವ್ಯಕ್ತಪಡಿಸಿದ್ದಾರೆ. ನಮ್ಮ ತಾಯಿ ಸೋನಿಯಾ ಗಾಂಧಿ ಕೂಡ ವಿಷಾದ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಘಟನೆ ಬಗ್ಗೆ ತಮ್ಮ ಪಕ್ಷದ ನಿಲುವನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇವೆ ಅಂತಾ ರಾಹುಲ್ ಗಾಂಧಿ ಆಗಿರುವ ಡ್ಯಾಮೇಜ್ ಕಂಟ್ರೋಲ್‍ಗೆ ಮುಂದಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇತ್ತ ರಾಷ್ಟ್ರೀಯ ಅಲ್ಪಸಂಖ್ಯಾತರ ಸಮಿತಿಯೂ ಕೂಡ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾಗೆ ನೋಟಿಸ್ ಕಳುಹಿಸಿದೆ. ನಿಮ್ಮ ಹೇಳಿಕೆ ಒಂದು ಧರ್ಮದ ಜನರ ಭಾವನೆಗಳಿಗೆ ಧಕ್ಕೆ ತರುವಂತಿದೆ. ಹೀಗಾಗಿ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡುವಂತೆ ಸಮಿತಿ ಪಿತ್ರೋಡಾಗೆ ನೋಟಿಸ್ ನೀಡಿದೆ.