“ಅದ್ದೂರಿ” ಸ್ಯಾಂಡಲ್‍ವುಡ್ ಸೂಪರ್ ಡೂಪರ್ ಸಿನಿಮಾಗಳಲ್ಲಿ ಒಂದು. ಆ್ಯಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಹಾಗೂ ರಾಧಿಕಾ ಪಂಡಿತ್ ನಟನೆಯಲ್ಲಿ ಮೂಡಿಬಂದ ಈ ಸಿನಿಮಾ ಬ್ಲಾಕ್ ಬಾಸ್ಟರ್ ಸಿನಿಮಾವಾಗಿ ಯಶಸ್ಸು ಗಳಿಸಿತ್ತು. ಇದೀಗ ಅದ್ದೂರಿ ಸಿಕ್ವೇಲ್ ಅಂದ್ರೆ ಪಾರ್ಟ್-2 ಗೆ ಭರ್ಜರಿ ತಯಾರಿ ನಡೀತಿದೆ. ಇಂಟ್ರೆಸ್ಟಿಂಗ್ ಸಂಗತಿ ಅಂದ್ರೆ ಈ ಬಾರಿ ನಾಯಕನಾಗಿ ಕಾಣಿಸಿಕೊಳ್ತಿರೊದು ಧ್ರುವಾ ಅಲ್ಲ ಬದಲಾಗಿ ಉಪ್ಪಿ ಫ್ಯಾಮಿಲಿಯ ಕುಡಿ ನಿರಂಜನ್ ಸುಧೀಂದ್ರ..!
ನಾಯಕನಾಗಿ ಎಂಟ್ರಿ ಕೊಟ್ಟ ನಿರಂಜನ್
ರಿಯಲ್ ಸ್ಟಾರ್ ಉಪೇಂದ್ರ ಸಹೋದರನ ಮಗ ನಿರಂಜನ್ ಸುಧೀಂದ್ರ ಅದ್ದೂರಿ-2 ಸಿನಿಮಾದ ಮೂಲಕ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಳ್ತಿದ್ದಾರೆ. ಈ ಹಿಂದೆ ಪ್ರಿಯಾಂಕ ಉಪೇಂದ್ರ ಜೊತೆಯಾಗಿ ‘ಸೆಕೆಂಡ್ ಹಾಫ್ ’ ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡಿದ್ದ ನಿರಂಜನ್, ಇದೀಗ ಲವರ್ ಬಾಯ್ ಗೆಟಪ್‍ನಲ್ಲಿ ಮಿಂಚೋಕೆ ರೆಡಿಯಾಗ್ತಿದ್ದಾರೆ.
ಅಂದ್ಹಾಗೇ ಚಿತ್ರಕ್ಕೆ ವೆಂಕಟೇಶ್ ಆ್ಯಕ್ಷನ್ ಕಟ್ ಹೇಳ್ತಾಯಿದ್ದು ಅದ್ದೂರಿ ಸಿನಿಮಾಗೆ ಬಂಡವಾಳ ಹೂಡಿದ್ದ ನಿರ್ಮಾಪಕ ಶಂಕರ್ ರೆಡ್ಡಿ ಪಾರ್ಟ್-2 ಚಿತ್ರಕ್ಕೂ ನಿರ್ಮಾಪಕರಾಗಿದ್ದಾರೆ. ಉಪ್ಪಿ ಮಗಳು ಐಶ್ವರ್ಯ ‘ದೇವಕಿ’ ಚಿತ್ರದಲ್ಲಿ ನಟಿಸಿದ್ದು ಇದೀಗ ಹೀರೋ ಆಗಿ ನಿರಂಜನ್ ಸುಧೀಂದ್ರ ಎಂಟ್ರಿಕೊಟ್ಟಿದ್ದಾರೆ. ಧ್ರುವಾ ಸರ್ಜಾ ಅದ್ದೂರಿ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿಕೊಟ್ಟಿದ್ರು. ಈಗ ನಿರಂಜನ್ ಅದೇ ಟೈಟಲ್‍ನಲ್ಲಿಯೇ ಇಂಡಸ್ಟ್ರಿಗೆ ಬರ್ತಿದ್ದಾರೆ. ಚಿತ್ರದ ಶೂಟಿಂಗ್‍ಗೆ ಸದ್ಯದಲ್ಲೇ ಗ್ರೀನ್ ಸಿಗ್ನಲ್ ಸಿಗಲಿದೆ.