ಹಿಂದು ಸೇವಾ ಪ್ರತಿಷ್ಠಾನ :ಸಮಗ್ರ ಶಿಶುಶಿಕ್ಷಣ ತರಬೇತಿ ಶಿಬಿರ – 10.5.2019 ರಿಂದ 20.5.2019
ಹಿಂದು ಸೇವಾ ಪ್ರತಿಷ್ಠಾನದ ವತಿಯಿಂದ ನಡೆಯಲಿರುವ 10 ದಿನದ ಸಮಗ್ರ ಶಿಶುಶಿಕ್ಷಣ ತರಬೇತಿ ಶಿಬಿರದ ಉದ್ಘಾಟನೆಯು ದಿನಾಂಕ 10.5.2019 ರಂದು ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದ ಸಾಧನಾ ಸಭಾಭವನದಲ್ಲಿ ನಡೆಯಿತು. ಶ್ರೀಮತಿ ವಿದ್ಯಾಗೌರಿ ಪುತ್ತೂರು ಇವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಾದ್ವಿ ಶ್ರೀ ಶ್ರೀ ಶ್ರೀ ಮಾತನಂದಮಯಿ ಶ್ರೀ ಕ್ಷೇತ್ರ ಒಡಿಯೂರು ಇವರು ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಆರ್ಶಿವಾಚನ ನೀಡಿದ್ದಾರೆ. ಸುರೇಶ್ ಜಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ|| ಪ್ರಭಾಕರ ಭಟ್ ಕಲ್ಲಡ್ಕ, ನಾರಾಯಣ ಸೋಮಾಯಾಜಿ , ವಸಂತ ಮಾಧವ ಹಾಗೂ ಶಿಶು ಶಿಕ್ಷಣದ ಪ್ರಮುಖರಾದ ಶ್ರೀಮತಿ ಅನ್ನಪೂರ್ಣ, ಭ|| ಶಾಂತ, ಭ|| ಗಂಗಾ ಉಪಸ್ಥಿತರಿದ್ದರು.
ಒಟ್ಟು 49 ಶಿಬಿರಾರ್ಥಿಗಳು ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೀಮತಿ ಶೋಭಾ ನಿರೂಪಿಸಿ, ಭ||ಲಕ್ಷಿತಾ ಸ್ವಾಗತಿಸಿ, ಶ್ರೀಮತಿ ವಾಣಿ ವಂದಿಸಿದರು.