Highlights :
• ಪರೇಶ್ ಒಬ್ಬ ಹಿಂದೂ ಅವನ ಹತ್ಯೆ ರಾಜಕೀಯ ಪ್ರೇರಿತ, ಪರೇಶ್ ಕುಟುಂಬಕ್ಕೆ 25 ಲಕ್ಷ ಪರಿಹಾರ ನೋಡಲು – ಡಾ. ಎಮ್.ಕೆ. ಪ್ರಸಾದ್
• ಹತ್ಯೆ ಹಿಂದೆ ಪಿ.ಎಫ್.ಐ. ಕೈವಾಡ ಶಂಕೆ – ಮುರಳಿಕೃಷ್ಣ ಹಸಂತಡ್ಕ
• ಹತ್ಯೆ ತನಿಖೆ ಎನ್.ಐ.ಎ. ಗೆ ವಹಿಸಲಿ – ಅರುಣ್ ಕುಮಾರ್ ಪುತ್ತಿಲ
• ಪ್ರಕಾಶ್ ರೈಯಾದಿಯಾಗಿ ಬುದ್ದಿ ಜೀವಿಗಳು ನಾಲಿಗೆ ಕಳಕೊಂಡಿದ್ದಾರೆ – ಶ್ಯಾಮ ಸುದರ್ಶನ್ ಹೊಸಮೂಲೆ
ಪುತ್ತೂರು : ಹಿಂದೂ ಜಾಗರಣಾ ವೇದಿಕೆ ವತಿಯಿಂದ ಪುತ್ತೂರು ಬಸ್ ನಿಲ್ದಾಣದ ಗಾಂಧಿ ಕಟ್ಟೆ ಬಳಿ ಸಂಜೆ ನೂರಾರು ಸಂಖ್ಯೆಯಲ್ಲಿ ಸೇರಿ ಹೊನ್ನಾವರದ ಪರೇಶ್ ಮೋಸ್ತ ಹತ್ಯೆಯನ್ನು ದೊಂದಿ ಹಿಡಿದು ಪ್ರತಿಭಟಿಸಿದ್ದಾರೆ.
ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದ ಹಿರಿಯ ವೈದ್ಯ ಡಾ. ಎಮ್.ಕೆ. ಪ್ರಸಾದ್ ಮಾತನಾಡಿ ಪರೇಶ್ ಮೇಸ್ತ ಒಬ್ಬ ಅಮಾಯಕ ಹಿಂದೂ ಕಾರ್ಯಕರ್ತರ, ರಾಜಕೀಯ ಪ್ರೇರಿತವಾಗಿ ಅವನ ಹತ್ಯೆ ನಡೆದ್ದರು ಅದನ್ನು ಸಹಜ ಸಾವು ಎಂಬುದಾದಿ ಬಿಂಬಿಸುತ್ತಿರುವದು ಖಂಡನೀಯ, ಪ್ರರೇಶ್ ಅವರದ್ದು ಸಹಜ ಸಾವಲ್ಲ ಅದು ಕೊಲೆ, ಕಗ್ಗೊಲೆ, ತಕ್ಷಣ ಇದಕ್ಕೆ ನ್ಯಾಯ ಒದಗಿಸಿ ಪರೇಶ್ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ಸರಕಾರ ನೀಡಬೇಕಾಗಿ ಆಗ್ರಹಿಸಿದ್ದಾರೆ.
ನಂತರ ಮತನಾಡಿದ ಮುರಳಿಕೃಷ್ಣ ಹಂಸತ್ತಡ್ಕ ಸಂಘ ಪರಿವಾರದ ಕಾರ್ಯಕರ್ತರನ್ನು ಇದೇ ಮೊದಲಲ್ಲ ಈ. ಹಿಂದೆಯೂ ಹಲವಾರು ಭಾರಿ ಇದೇ ರೀತಿ ರಾಜ್ಯದಲ್ಲಿ ಹತ್ಯೆ ಮಾಡಲಾಗಿದ್ದರೂ ಕೂಡಾ, ತಪ್ಪಿತಸ್ಥರು ಪಿ.ಎಫ್.ಐ. ,ಕೆ.ಎಫ್.ಡಿ. ಸಂಘಟನೆಗೆ ಸೇರಿದವರಾಗಿದ್ದು ಕೂಡ ಆ ಸಂಘಟನೆಗಳನ್ನು ಬ್ಯಾನ್ ಮಾಡುವ ಯಾವುದೇ ಕೆಲಸವನ್ನು ರಾಜ್ಯ ಸರಕಾರ ಮಾಡಲಿಲ್ಲ ಎಂದರು.
ಹಿಂದೂ ಮುಖಂಡರಾದ ಅರುಣ್ ಪುತ್ತಿಲ ಮಾತನಾಡಿ ಸಂಘಟನೆ ಯಾರ ಬೆದರಿಕೆಗೂ ಬಗ್ಗೂದಿಲ್ಲ, ಪರೇಶ್ ಅವರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ, ಅವರ ಸಾವಿನ ಹಿಂದೆ ಇರುವ ಅಪರಾಧಿಗಳನ್ನು ತಕ್ಷಣ ಬಂಧಿಸಬೇಕು. ಪ್ರಕರಣವನ್ನು ಎನ್.ಐ.ಎ. ಗೆ ವಹಿಸಬೇಕೆಂದು ಆಗ್ರಹಿಸಿದರು.
ನಂತರ ಮಾತನಾಡಿದ ಹಿಂದೂ ಮುಖಂಡ ಶ್ಯಾಮ ಸುದರ್ಶನ ಹೊಸಮೂಲೆ ಮುಡಬಿದ್ರೆಯ ಪ್ರವೀಣ್ ಪೂಜಾರಿಯಿಂದ ಹಿಡಿದು ಪರೇಶ್ ಅವರವರೆಗೆ ಹತ್ಯೆಯಾದಾಗ ಅವರ ಸಾವಿಗೆ ನ್ಯಾಯದೊರಕಿಸುವ ಕೆಲಸಗಳು ಈವರೆಗೂ ಆಗಲಿಲ್ಲ. ಇವತ್ತು ಪ್ರಶೇರ್ ನಾಳೆ ನಾವು, ಮೊನ್ನೆ ಗೌರಿ ಲಂಕೇಶರ ಹತ್ಯೆಯಾದ ಬೊಬ್ಬೆ ಹೊಡೆದ ಬುದ್ಧಿ ಜೀವಿಗಳು ಪರೇಶ್ ಹತ್ಯೆ ಯಾದಾಗ ಯಾಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ, ನ್ಯಾಯವಾದಿಗಳದಾದ ಜಯಾನಂದ,ಹಿಂ.ಜಾ.ವೇ. ಮುಖಂಡ ಅಜಿತ್ ರೈ, ಚಿನ್ಮಯ, ಸಚಿನ್, ಬಿ.ಜೆ.ಪಿ. ಮುಖಂಡರಾದ ವಿದ್ಯಾ ಆರ್. ಗೌರಿ, ಲಕ್ಷ್ಮಣ ಗೌಡ ಬೆಳ್ಳಿಪಾಡಿ, ರಾಜೇಶ್ ಬನ್ನೂರು, ಚಂದ್ರ ಶೇಖರ ಬಪ್ಪಳಿಗೆ ಮತ್ತಿತರರು ಉಪಸ್ಥಿತರಿದ್ದರು.