Monday, January 20, 2025
ಸುದ್ದಿ

ಮಂದಿರದಲ್ಲಿ ಮದುವೆಯಾಗಿ ಮಸೀದಿಯಲ್ಲಿ ಇಫ್ತಾರ್ ಕೂಟ ಆಯೋಜಿಸಿದ ವರ..! – ಕಹಳೆ ನ್ಯೂಸ್

ವಿಟ್ಲ : ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕೋಡಪದವಿನ ಯುವಕ ಶ್ರೀ ರಾಮಮಂದಿರದಲ್ಲಿ ಮದುವೆಯಾಗಿ ಮಸೀದಿಯಲ್ಲಿ ಇಫ್ತಾರ್ ಕೂಟ ಏರ್ಪಡಿಸಿದ್ದಾರೆ.

ಕೋಡಪದವಿನ ಕುಕ್ಕಿಲ ನಿವಾಸಿ ಧನಂಜಯ್‍ರ ಮದುವೆ ಮೇ 8 ರಂದು ವಿಟ್ಲದ ಶ್ರೀ ರಾಮಮಂದಿರದಲ್ಲಿ ನೆರವೇರಿದೆ. ಮದುವೆಗೆ ಊರಿನ ಜನರೆಲ್ಲ ಆಗಮಿಸಿದ್ದು, ಮುಸ್ಲಿಮರು ಮದುವೆಗೆ ಬಂದು ಶುಭ ಹಾರೈಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಂಜಾನ್ ಉಪವಾಸ ಕಾರಣದಿಂದ ಮದುವೆಯಲ್ಲಿ ಅವರು ಊಟ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಧನಂಜಯ್ ಅವರು ಕುಕ್ಕಿಲದ ಮಸೀದಿಯಲ್ಲಿ ಇಫ್ತಾರ್ ಕೂಟ ಆಯೋಜಿಸಿದ್ದಾರೆ. ಮದುವೆಗೆ ಬಂದು ಶುಭ ಹಾರೈಸಿದ ಮುಸ್ಲಿಮರು ಇಫ್ತಾರ್ ಕೂಟದಲ್ಲಿ ಪಾಲ್ಗೊಂಡಿದ್ದಾರೆ. ಧನಂಜಯ್ ನಡೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು