Monday, January 20, 2025
ರಾಜಕೀಯಸುದ್ದಿ

ಮತದಾನ ಮಾಡಿದ ವಿರಾಟ್ ಕೊಹ್ಲಿ -ಕಹಳೆ ನ್ಯೂಸ್

ಲೋಕಸಭಾ ಚುನಾವಣೆಯ 6ನೇ ಹಂತದ ಮತದಾನ ನಡೆಯುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಏಳು ರಾಜ್ಯಗಳ 59 ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತಿದ್ದು ಬೆಳಗ್ಗೆಯಿಂದಲೇ ಮತದಾನ ಬಿರುಸಿನಿಂದ ನಡೆಯುತ್ತಿದೆ. ಹಾಗಾಗಿ ಟಿಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹರಿಯಾಣದಲ್ಲಿ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ.

ಬೆಳಗ್ಗೆಯೇ ಗುರುಗ್ರಾಮದ ಪೈನ್‍ಕ್ರೆಸ್ಟ್ ಶಾಲೆಯ ಪೋಲಿಂಗ್ ಬೂತ್‍ಗೆ ಆಗಮಿಸಿದ ಕೊಹ್ಲಿ ಕ್ಯೂನಲ್ಲಿ ನಿಂತು, ವೋಟ್ ಹಾಕಿದರು. ಅಲ್ಲದೆ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಹಂಚಿಕೊಂಡಿರೋ ಕೊಹ್ಲಿ, ದೇಶವನ್ನ ಕಟ್ಟುವಲ್ಲಿ ಮತದಾನ ನಿಮ್ಮ ಹಕ್ಕು ಹಾಗೂ ಜವಾಬ್ದಾರಿ, ಹೋಗಿ ವೋಟ್ ಮಾಡಿ ಎಂದು ಬರೆದುಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು