Monday, January 20, 2025
ಸಿನಿಮಾಸುದ್ದಿ

ಬುರ್ಖಾದಲ್ಲಿ ಕಾಣಿಸಿಕೊಂಡ ಐರಾವತ ಬೆಡಗಿ ಊವರ್ಶಿ ರೌಟೇಲಾ – ಕಹಳೆ ನ್ಯೂಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಮಿ.ಐರಾವತ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದ ಊರ್ವಶಿ ಮತ್ತೆ ಸುದ್ದಿಯಲ್ಲಿದ್ದಾರೆ. ಮುದ್ದು ಮಖದ ಚೆಲುವೆ ಊರ್ವಶಿ ರೌಟೇಲಾ ಇದೀಗ ಬುರ್ಖಾದಲ್ಲಿ ಕಾಣಿಸಿಕೊಂಡಿದ್ದಾರೆ.

ಅಬು ಧಾಬಿಗೆ ಭೇಟಿ ನೀಡಿರುವ ಊರ್ವಶಿ ಅಲ್ಲಿನ ಪ್ರಸಿದ್ಧ ಶೇಕ್ ಝಯೇದ್ ಗ್ರ್ಯಾಂಡ್ ಮಸೀದಿಗೆ ಭೇಟಿ ನೀಡಿದ್ದಾರೆ. ಅಲ್ಲಿ ಅವರು ಬುರ್ಕಾ ಧರಿಸಿ ತೆಗೆಸಿಕೊಂಡಿರುವ ಫೋಟೋ ಈಗ ಸಖತ್ ವೈರಲ್ ಆಗಿದೆ. ಶೇಕ್ ಝಯೇದ್‍ನ ಸೌಂದರ್ಯಕ್ಕೆ ಮನಸೋತಿರುವ ಐರಾವತ ಬೆಡಗಿ ರಂಜಾನ್ ಶುಭಾಶಯಗಳನ್ನು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಮ್ಮ ಉಡುಗೆಯಿಂದಲೇ ಸದಾ ಕಾಲ ಎಲ್ಲರ ಕಣ್ಣು ಕುಕ್ಕುವ ಊರ್ವಶಿ, ಇತ್ತೀಚೆಗೆ ಹೊಸದಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಈ ಫೋಟೋದಲ್ಲಿ ಸ್ಟನ್ನಿಂಗ್ ಆಗಿ ಕಾಣಿಸಿಕೊಂಡಿದ್ದಾರೆ. ಮಾತ್ರವಲ್ಲ ಆ ಫೋಟೋಗಳಲ್ಲಿ ಊರ್ವಶಿ ಅವರ ಟೋನ್ಡ್ ಫಿಗರ್ ನೋಡಿ ಕೆಲವರಂತೂ ಹೊಟ್ಟೆಕಿಚ್ಚು ಪಟ್ಟಿರುವುದರಲ್ಲಿ ಸಂಶಯವಿಲ್ಲ!

ಜಾಹೀರಾತು
ಜಾಹೀರಾತು
ಜಾಹೀರಾತು