Monday, January 20, 2025
ಕ್ರೀಡೆಸುದ್ದಿ

ಯಾರಾಗಲಿದ್ದಾರೆ 4ನೇ ಬಾರಿ ಐಪಿಎಲ್ ಚಾಂಪಿಯನ್..!?- ಕಹಳೆ ನ್ಯೂಸ್

ಇಂದು ಐಪಿಎಲ್ 2019 ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಈ ಬಾರಿ ಫೈನಲ್‍ನಲ್ಲಿ ಸೆಣೆಸಾಟ ನಡೆಸುತ್ತಿರುವ ತಂಡಗಳು ಸಾಮಾನ್ಯ ತಂಡಗಳಲ್ಲ, ಬದಲಾಗಿ ಬರೋಬ್ಬರಿ 3 ಬಾರಿ ಐಪಿಎಲ್ ಟ್ರೋಫಿ ಎತ್ತಿದೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಉಭಯ ತಂಡಗಳು.

ಆದರೆ ಇವರಿಬ್ಬರಲ್ಲಿ ಈ ತಂಡವೇ ಸುಲಭವಾಗಿ ಗೆಲುವು ಸಾಧಿಸಲಿದೆ ಎಂದು ಹೇಳಲು ಅಸಾಧ್ಯ. ಕಾರಣ ಈ ಬಾರಿಯ ಟೂರ್ನಿಮೆಂಟ್ ಆರಂಭದಲ್ಲಿ ಹಲವು ಪಂದ್ಯಗಳನ್ನು ಸೋತು, ಅಂಕ ಪಟ್ಟಿಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಇದ್ದ ಮುಂಬೈ ಅಚ್ಚರಿ ಎಂಬಂತೆ ನೇರವಾಗಿ ಫೈನಲ್ ಪ್ರವೇಶಿಸಿಯೇ ಬಿಟ್ಟಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದು ಈ ಬಾರಿಯ ಅಚ್ಚರಿಯಾದರೂ ಇಂತಹ ಸಾಕಷ್ಟು ಅಚ್ಚರಿಗಳನ್ನು ಮುಂಬೈ ತಂಡದಿಂದ ಈ ಹಿಂದಿನ ಟೂರ್ನ್‍ಮೆಂಟ್‍ಗಳಲ್ಲಿ ನಾವು ಕಂಡಿದ್ದೇವೆ.ಚೆನ್ನೈ ತಂಡವು ಸತತ ಗೆಲುವುಗಳನ್ನು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲೇ ಇತ್ತು ಟೂರ್ನಿಯುದ್ದಕ್ಕೂ. ಆದರೆ ಕೊನೆಯಲ್ಲಿ ದುರ್ಬಲ ತಂಡಗಳು ಚೆನ್ನೈಗೆ ಬೆನ್ನಿ ಬೆನ್ನಿಗೆ ಆಘಾತಗಳನ್ನು ನೀಡಿದ್ದವು.

ಜಾಹೀರಾತು
ಜಾಹೀರಾತು
ಜಾಹೀರಾತು

ಅದೂ ಅಲ್ಲದೆ ಮೊನ್ನೆ ನಡೆದ ಪ್ಲೇ ಆಫ್ ಮೊದಲ ಪಂದ್ಯದಲ್ಲಿ ಇದೇ ಮುಂಬೈ ವಿರುದ್ಧ ಸೋತಿರುವುದು ಕೂಡ ಚೆನ್ನೈ ಪಾಲಿಗೆ ಹಿನ್ನಡೆಯನ್ನುಂಟು ಮಾಡಿತ್ತು. ವಿಪರೀತ ಕುತೂಹಲವನ್ನು ಹುಟ್ಟುಹಾಕಿರುವ ಇಂದಿನ ಫೈನಲ್ ಪಂದ್ಯವನ್ನು ಮಿಸ್ ಮಾಡ್ಬೇಡಿ.