Monday, January 20, 2025
ಸುದ್ದಿ

‘ನಿಖಿಲ್ ಎಲ್ಲಿದ್ದೀಯಪ್ಪಾ?’ ಹೆಸರಿನಲ್ಲಿ ಸಿನಿಮಾ ಬೇಡ: ಒಳ್ಳೇ ಹುಡುಗ ಪ್ರಥಮ್ ಹೇಳಿಕೆ – ಕಹಳೆ ನ್ಯೂಸ್

ಬೆಳಗಾವಿ: ನಿಖಿಲ್ ಎಲ್ಲಿದ್ದೀಯಪ್ಪಾ ಸಿನಿಮಾ ಬರಬಾರದೆಂದು ನಾನು ಆಸೆ ಪಡ್ತೀನಿ. ಟ್ರೋಲ್ ಆಗಿರೋ ವಿಚಾರ ಸಿನಿಮಾ ಆಗಬಾರದು. ನಿಖಿಲ್ ಎಲ್ಲಿದ್ದೀಯಪ್ಪಾ? ಅನ್ನೋ ಟೈಟಲ್ ಅನ್ನು ಯಾವುದೇ ಸಿನಿಮಾಗೆ ಕೊಡಬಾರದು. ಇದಕ್ಕೆ ಫಿಲ್ಮ್ ಚೇಂಬರ್ ಕೂಡ ಅವಕಾಶ ಕೊಡಬಾರದು ಬಿಗ್ ಬಾಸ್ ವಿನ್ನರ್ ಪ್ರಥಮ್ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಪ್ರಥಮ್, ಒಬ್ಬರ ತೇಜೋವಧೆ ಮಾಡೋದು ಸರಿಯಲ್ಲ. ಈ ಸಿನಿಮಾದ ಬಗ್ಗೆ ನನಗೆ ಸಮಾಧಾನವಿಲ್ಲ. ದೇವೇಗೌಡ, ಸಿದ್ದರಾಮಯ್ಯ, ಯಡಿಯೂರಪ್ಪ ಲೆಜೆಂಡ್ಸ್. 30-40 ವರ್ಷ ದುಡಿದು ಆ ಸ್ಥಾನಕ್ಕೆ ಏರಿದ್ದಾರೆ. ಅವರ ಕಾಲು ಎಳೆಯೋದು ಸರಿಯಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ನಿಖಿಲ್ ಎಲ್ಲಿದ್ದೀಯಪ್ಪಾ? ಟ್ರೋಲ್ ವಿಚಾರ ಜಾಗ್ವಾರ್ ಸಿನಿಮಾ ಆಡಿಯೋ ಬಿಡುಗಡೆಯಲ್ಲಿ ನಡೆದಿದ್ದು, ಇದರಲ್ಲಿ ಎಚ್.ಡಿ ಕುಮಾರಸ್ವಾಮಿ ಅವರದ್ದಾಗಲಿ ಅಥವಾ ನಿಖಿಲ್ ಅವರದ್ದಾಗಲಿ ತಪ್ಪಿಲ್ಲ. ಕಾರ್ಯಕ್ರಮ ಆಯೋಜಕರು ಮಾಡಿರೋ ಸಿನಿಮಾ ಗಿಮಿಕ್ ಇದು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಿನಿಮಾ ಗಿಮಿಕ್ ಅನ್ನು ರಾಜಕೀಯಕ್ಕೆ ಬಳಸೋದು ತಪ್ಪಲ್ಲ. ನಾನು ಸಿನಿಮಾಗಾಗಿ ಅನೇಕ ಗಿಮಿಕ್ ಮಾಡ್ತೀನಿ. ನಿಖಿಲ್ ಎಲ್ಲಿದ್ದೀಯಪ್ಪಾ? ಸಿನಿಮಾ ಬರೋದು ಬೇಡ. ದರ್ಶನ್, ಯಶ್ ಜೋಡೆತ್ತು ಸಿನಿಮಾ ಬಂದ್ರೆ ಬರಲಿ ಎಂದು ಪ್ರಥಮ್ ಹೇಳಿದರು.