Recent Posts

Monday, January 20, 2025
ಕ್ರೀಡೆಸುದ್ದಿ

ಮಹಿಳೆಯರ ಐಪಿಎಲ್‍ನಲ್ಲಿ ಲೇಡಿ ಧೋನಿಯ ಕಮಾಲ್ – ಕಹಳೆ ನ್ಯೂಸ್

ಜೈಪುರ: ನಿನ್ನೆ ಜೈಪುರದಲ್ಲಿ ನಡೆದ ಲೇಡಿಸ್ ಸ್ಪೆಷಲ್ ಐಪಿಎಲ್ ಕ್ರಿಕೆಟ್ ಫೈನಲ್‍ನಲ್ಲಿ ಮಿಥಾಲಿ ರಾಜ್ ನೇತೃತ್ವದ ವೆಲೋಸಿಟಿ ಟೀಂ ವಿರುದ್ಧ ಸೂಪರ್ ನೋವಾಸ್ ತಂಡ ಭರ್ಜರಿ ಜಯ ದಾಖಲಿಸಿದೆ. ಕ್ಯಾಪ್ಟನ್ ಹರ್ಮನ್‍ಪ್ರೀತ್ 37 ಎಸೆತಗಳಲ್ಲಿ 4 ಬೌಂಡರಿ 3 ಸಿಕ್ಸರ್ ಸಮೇತ 51ರನ್ ಗಳಿಸಿ ತಂಡದ ಗೆಲುವಿಗೆ ಕಾಣಿಕೆ ನೀಡಿದ್ರು.

ಸೀನಿಯರ್ ಮಿಥಾಲಿ ರಾಜ್‍ಗೆ ಟಕ್ಕರ್ ಕೊಟ್ಟ ಸೂಪರ್ ನೋವಾದ ಹರ್ಮನ್ ಪ್ರೀತ್ ಕೌರ್ ಈ ಪಂದ್ಯ ಮುಗಿಯುತ್ತಲೇ ಲೇಡಿ ಧೋನಿ ಅಂತಾ ಕರೆಸಿಕೊಳ್ತಿದ್ದಾರೆ. ಇದಕ್ಕೆ ಕಾರಣ ಈ ಮ್ಯಾಚ್‍ನಲ್ಲಿ, ಹರ್ಮನ್ ಪ್ರೀತ್ ತೋರಿದ ಮನಮೋಹಕ ಪ್ರದರ್ಶನ. ಧೋನಿಯಂತೆ ಚಾಣಾಕ್ಷ ನಾಯಕತ್ವ ತೋರಿದ ಹರ್ಮನ್‍ಪ್ರೀತ್ ಕೌರ್ ಬ್ಯಾಟಿಂಗ್‍ನಲ್ಲೂ ಕುಸಿಯುತ್ತಿದ್ದ ತಂಡಕ್ಕೆ ನೆರವಾದ್ರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು