Recent Posts

Sunday, January 19, 2025
ಸಿನಿಮಾಸುದ್ದಿ

ಹಾರರ್ ಕಾಮಿಡಿಯಲ್ಲಿ ‘ಶರಣಾವತಾರ’ – ಕಹಳೆ ನ್ಯೂಸ್

ಕನ್ನಡದ ಕಾಮಿಡಿ ಸ್ಟಾರ್ ನಟ ಎಂದೇ ಖ್ಯಾತರಾಗಿರುವ ಶರಣ್, ಇದೀಗ ಹೊಸ ‘ಅವತಾರವನ್ನೆತ್ತಿದ್ದಾರೆ. ಹೌದು, ನಟ ಶರಣ್ ಅವರು ಸದ್ಯ ಅವತಾರ ಪುರುಷ ಎಂಬ ಹೊಸ ಚಿತ್ರದಲ್ಲಿ ನಟಿಸುತ್ತಿದ್ದು, ಆದರೆ, ಹಾಸ್ಯನಟ ಶರಣ್ ನಟಿಸುತ್ತಿರುವ ಅವತಾರ ಪುರುಷ ಚಿತ್ರವು ಬಹುತೇಕರು ಅಂದುಕೊಂಡಂತೆ, ಸಂಪೂರ್ಣ ಹಾಸ್ಯ ಚಿತ್ರವಲ್ಲ. ಬದಲಿಗೆ ಅದೊಂದು ಹಾಸ್ಯ ಮಿಶ್ರಿತ ಹಾರರ್ ಮೂವಿ ಎಂಬುದು ಇದೀಗ ಜಗಜ್ಜಾಹೀರಾಗಿದೆ. ಈ ಸಂಗತಿಯನ್ನು ನಟ ಶರಣ್ ಬಹಿರಂಗ ಪಡಿಸಿಲ್ಲ. ಆದರೆ ನಿರ್ದೇಶಕರಾದ ಸುನಿ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಟ ಶರಣ್ ಮುಂಬರುವ ಚಿತ್ರವಾದ ಅವತಾರ ಪುರುಷ ಹಾರರ್ ಕಥೆಯನ್ನು ಹೊಂದಿದೆ ಎನ್ನಲಾಗಿದೆ. ಈ ಚಿತ್ರದ ನಿರ್ದೇಶಕ ಸುನಿ “ಇದೊಂದು ಹಾಸ್ಯ ಚಿತ್ರ ಅಂದುಕೊಂಡರೆ ನೀವು ತಪ್ಪು ಯೋಚನೆಯಲ್ಲಿದ್ದೀರಿ ಎಂದು ಅರ್ಥ. ಮುಂಬರುವ ಶರಣ್ ‘ಅವತಾರ ಪುರುಷ’ ಚಿತ್ರವನ್ನು ‘ಹಾರರ್ ಕಾಮಿಡಿ’ ಎನ್ನಬಹುದು. ಈ ಚಿತ್ರದಲ್ಲಿ ಹಾರರ್ ಕಥೆಯನ್ನು ಹಾಸ್ಯಕ್ಕೂ ಒಗ್ಗುವಂತೆ ನಿರೂಪಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಲ್ಲಿ ನಗುವ ಜೊತೆ ಪ್ರೇಕ್ಷಕರು ಬೆವರನ್ನು ಕೂಡ ಒರೆಸಿಕೊಳ್ಳಬೇಕಿದೆ” ಎಂದು ಸಿನಿಮಾ ಕಥೆಯ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಶರಣ್ ನಾಯಕತ್ವದ ‘ಅವತಾರ ಪುರುಷ’ ಚಿತ್ರದಲ್ಲಿ ಸುಧಾರಾಣಿ ಮತ್ತು ಸಾಯಿಕುಮಾರ್ ಕೂಡ ನಟಿಸಿದ್ದಾರೆ. ಇನ್ನು ಶರಣ್ ಮಗಳು ಪುಣ್ಯಾ ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ ಪ್ರವೇಶ ಪಡೆದಿದ್ದಾಳೆ. ಒಟ್ಟಿನ್ಲಲಿ, ಶರಣ್ ನಟನೆಯಲ್ಲಿ ಮುಂಬರುವ ಚಿತ್ರ ವಿಭಿನ್ನವಾಗಿದ್ದು ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.

ಶರಣ್‍ಗೆ ನಾಯಕಿಯಾಗಿ ಆಶಿಕಾ ರಂಗನಾಥ್ ನಟಿಸಿದ್ದಾರೆ. ಸುಧಾರಾಣಿ ಮತ್ತು ಸಾಯಿಕುಮಾರ್ ಕೂಡ ನಟಿಸಿದ್ದಾರೆ. ಇನ್ನು ಶರಣ್ ಮಗಳು ಪುಣ್ಯಾ ಈ ಚಿತ್ರದ ಮೂಲಕ ಸ್ಯಾಂಡಲ್‍ವುಡ್ ಪ್ರವೇಶ ಪಡೆದಿದ್ದಾಳೆ. ಒಟ್ಟಿನ್ಲಲಿ, ಶರಣ್ ನಟನೆಯಲ್ಲಿ ಮುಂಬರುವ ಚಿತ್ರ ವಿಭಿನ್ನವಾಗಿದ್ದು ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ