Recent Posts

Sunday, January 19, 2025
ಸುದ್ದಿ

ಉಗ್ರರನ್ನು ಹೊಡೆಯಲೂ ನಮ್ಮ ಯೋಧರು ಚುನಾವಣಾ ಆಯೋಗದ ಅನುಮತಿ ಕೇಳಬೇಕಾ: ನರೇಂದ್ರ ಮೋದಿ – ಕಹಳೆ ನ್ಯೂಸ್

ಖುಷಿನಗರ: ‘ನಮ್ಮ ಯೋಧರು ವೈರಿಗಳನ್ನು ಎನ್ ಕೌಂಟರ್ ಮಾಡಲು ಚುನಾವಣಾ ಆಯೋಗದ ಅನುಮತಿ ಕೇಳಬೇಕಾ? ವಿಪಕ್ಷಗಳು ಏನು ನಾಟಕ ಮಾಡುತ್ತಿವೆ?’ ಇದು ಪ್ರಧಾನಿ ನರೇಂದ್ರ ಮೋದಿಯವರು ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.

ಉತ್ತರ ಪ್ರದೇಶದ ಖುಷಿನಗರದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಪ್ರಧಾನಿ ಮೋದಿಯವರು ಇಂದು ಬೆಳಗ್ಗೆ ಕಾಶ್ಮೀರದ ಶೋಷಿಯಾನ್‍ನಲ್ಲಿ ಉಗ್ರರ ವಿರುದ್ಧ ನಡೆದ ಎನ್ ಕೌಂಟರ್‍ನ್ನು ಉಲ್ಲೇಖಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ, ಆದರೆ ಸೈನಿಕರು ಉಗ್ರರ ಏನ್ ಕೌಂಟರ್ ಮಾಡುತ್ತಿದ್ದಾರೆ ಎಂದು ವಿಪಕ್ಷಗಳು ಹೇಳುತ್ತಿವೆ. ಹಾಗಾದರೆ ಯೋಧರು ಉಗ್ರರನ್ನು ಸದೆಬಡಿಯಲು ಚುನಾವಣಾ ಆಯೋಗದ ಅನುಮತಿ ಕೇಳುವ ಅಗತ್ಯವಿದೆಯೇ ಎಂದು ವಿಪಕ್ಷಗಳನ್ನು ಟೀಕೆ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷದ ವಿರುದ್ಧ ಟೀಕೆ ಮಾಡಿದ ನರೇಂದ್ರ ಮೋದಿಯವರು, ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಮತ್ತು ಮಾಯಾವತಿಯವರು ಮುಖ್ಯಮಂತ್ರಿಯಾಗಿದ್ದ ಅವಧಿಗಿಂತ ಹೆಚ್ಚಿನ ಅವಧಿಗೆ ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದೆ. ಆದರೆ ನನ್ನ ಮೇಲೆ ಯಾವುದೇ ಭ್ರಷ್ಟಾಚಾರದ ಕರಿನೆರಳಿಲ್ಲ ಎಂದರು.

ರಾಜಸ್ಥಾನದ ಅಲ್ವಾರ್ ಗ್ಯಾಂಗ್ ರೇಪ್ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿಯವರು, ಮಾಯಾವತಿಯವರೇ, ನೀವು ಮೊಸಳೆ ಕಣ್ಣೀರು ಹಾಕಬೇಡಿ. ಮಹಿಳೆಗೆ ನ್ಯಾಯ ದೊರಕಿಸಬೇಕೆಂದು ನಿಮಗೆ ನಿಜಕ್ಕೂ ಮನಸ್ಸಿದ್ದರೆ, ನೀವು ರಾಜಸ್ಥಾನದಲ್ಲಿ ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ಹಿಂಪಡೆಯಿರಿ ಎಂದು ಗುಡುಗಿದರು.