Sunday, January 19, 2025
ಅಂಕಣ

ಎಲ್ಲಾ ಅಮ್ಮಂದಿರಿಗೂ ಅಮ್ಮಂದಿರ ದಿನದ ಶುಭಾಶಯ – ಕಹಳೆ ನ್ಯೂಸ್

ಅಮ್ಮ…… ನನ್ನ ಪುಟ್ಟ ಪ್ರಪಂಚದ ಮುದ್ದು ದೇವತೆ. ಆಕೆಯ ಆ ಮಡಿಲ ಬಿಸಿ ಅಪ್ಪುಗೆ ವಿವರಣೆಗೆ ಮೀರಿದ್ದಾಗಿದೆ. ನಾ ಅತ್ತಾಗ ತನ್ನ ಕಣ್ಣಲ್ಲೂ ಹನಿ ನೀರನ್ನ ತುಂಬಿಕೊಂಡವಳು. ನನ್ನ ತುಂಟಾಟವನ್ನ ಸಹಿಸಿಕೊಂಡು, ನಾ ಗುಮ್ಮ ಬಂತೆಂದು ಭಯ ಪಟ್ಟಾಗ ಹೆಗಲಲ್ಲಿ ಬಚ್ಚಿಟ್ಟು ಆಸರೆ ನೀಡಿದವಳು. ತುಂಟ ಮಾತುಗಳಿಂದ ಮುಖದಲ್ಲಿ ನಗುತರಿಸಿದ ಪ್ರೀತಿಯ ಜೀವ. ಪ್ರತಿ ಹೆಜ್ಜೆಯಲ್ಲಿಯು ನನ್ನೊಂದಿಗೆ ಜೊತೆಯಾಗಿ ಮುನ್ನಡೆಯುವ ಭರವಸೆಯ ಬೆಳಕು ಆಕೆ ಅವಳೆ ನನ್ನಾಕೆ ನನ್ನಮ್ಮ.

ಕಂದನ ಪುಟ್ಟ ಬಾಯಿಯ ಅಳುವಿಗೆ ದನಿಯಾಗುವವಳು ಅಮ್ಮ. ಅತ್ತಾಗ ತನ್ನ ಕಣ್ಣಲ್ಲಿ ನೀರಾಡಿಸುತ್ತಾ, ಪುಟ್ಟ ಕಂದಮ್ಮನ ಉಸಿರಲ್ಲಿ ಉಸಿರಾಗಿ ನಿಂತವಳು ಅವಳೇ. ಹಗಲಿರುಳು ತನ್ನ ಕಂದಮ್ಮನಿಗಾಗಿ ನಿದ್ದೆಗೆ ರಜಾ ಹಾಕಿದ ದಿನಗಳು ಇವೆ. ದಿನಂಪ್ರತಿ ಒಂದು ಕಿವಿಯನ್ನು ತನ್ನ ಕಂದನ ಬಳಿಯೇ ಇಟ್ಟು ಕೆಲಸದಲ್ಲಿ ತೊಡಗುವ ಮಾತೆ. ಆಕೆಗೆ ಏನು ಹೇಳಾಬೇಕಾಗಿಲ್ಲ, ತಾನಾಗಿಯೇ ಎಲ್ಲವನ್ನು ಅರಿತುಕೊಳ್ಳುತ್ತಾ ನಮ್ಮೊಂದಿಗೆ ನೆರಳಾಗಿ ನಿಲ್ಲುತ್ತಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮನದಲ್ಲಿ ಹೇಳಲಾರದ ದುಃಖವಿದ್ದರೂ ತನ್ನ ಮನದಲ್ಲೇ ಹುದುಗುಸಿ ನಗುಮುಖವನ್ನ ಹೊತ್ತು ಜೀವನದ ನೌಕೆಯನ್ನ ಮುನ್ನಡೆಸುವಳು. ಜೀವನದ ಹಾದಿಯಲ್ಲಿ ಬರುವ ಕಲ್ಲು ಮುಳ್ಳುಗಳನ್ನು ಸರಿಸಿ ನಡೆಯುವ ರಹಸ್ಯವನ್ನು ತಿಳಿಸಿಕೊಟ್ಟ ಜಗನ್ಮಾತೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಒಂದು ಮನೆಯ ಬೆಳಕಾಗಿ ಮನೆಯನ್ನು ಬೆಳಗುವ ಕಣ್ಣು ಆಕೆಯೇ. ಆಕೆ ತನ್ನ ಜೀವನದಲ್ಲಿ ಎಲ್ಲಾ ಪಾತ್ರಗಳಿಗೆ ಬಣ್ಣ ಹಚ್ಚುದರ ಮೂಲಕ ಜೀವನದ ಪಾಠವನ್ನು ಚೆನ್ನಾಗಿ ತಿಳಿದುಕೊಂಡಿರುತ್ತಾಳೆ. ಆದ್ರೆ ಎಲ್ಲರ ಕಣ್ಣಿಗೆ ಅಮ್ಮ ಮನೆ ಕೆಲಸ ಮಾಡುವ ಆಳು. ಆಕೆಗೆ ಏನೂ ತಿಳಿದಿಲ್ಲ, ಅಕೆ ಹೊರ ಪ್ರಪಂಚದ ಅರಿವಿಂದ ದೂರ ಇದ್ದರೆ ಚಂದ ಅನ್ನೋ ಏಷ್ಟೋ ಗಂಡಸರಿದ್ದರೆ. ಮನೆ ಮಂದಿಯ ಅಡಿಯಾಳಾಗಿ ದುಡಿಯುವವಳು ಅಮ್ಮ.

ತಾಯಿ ತನ್ನ ಮಮತೆ ಮಮಕಾರವನ್ನು ಧಾರೆಯೆರೆದು ನಾವು ನಮ್ಮ ಕಾಲ ಮೇಲೆ ನಿಲ್ಲುವಂತೆ ಮಾಡುತ್ತಾಳೆ. ಮುಂದೆ ಒಂದು ದಿನ ಆದ್ರೆ ತಾಯಿಯ ಕೈ ತುತ್ತು ತಿಂದ ಜೀವ ಈಗ ಬೆಳೆದು ದೊಡ್ಡಗಾಗಿದೆ, ಅಮ್ಮನ ಕಪ್ಪು ಕೂದಲುಗಳು ಇಂದು ಬೆಳ್ಳಗಾಗಿದೆ. ನಮ್ಮ ಹೆಜ್ಜೆ ಇಂದು ವೇಗವಾಗಿದೆ. ಭರವಸೆಯ ಬೆಳಕಾಗಿದ್ದ ಕಣ್ಣುಗಳಿಗೆ ಇಂದು ಕನ್ನಡಕ್ಕದ ವ್ಯವಸ್ಧೆಯಾಗಿದೆ. ಅಂದು ನಮ್ಮ ಕೈ ಹಿಡಿದು ಮುನ್ನಡೆಸಿದ ಕೈಗಳು ಇಂದು ಹೆಪ್ಪುಗಟ್ಟಿದೆ. ಆದರೆ ಮುದ್ದು ಅಮ್ಮನ ನಗು ಮಾತ್ರ ಹಾಗೆಯೇ ಅಛಲಮಾಗಿದೆ.

ಆಕೆಯ ಮುದ್ದಿನ ಮಗು ಇಂದು ಬೆಳೆದು ನಿಂತಿದೆ. ಆಕೆ ಹೊತ್ತ ಕನಸಿಗೆ ಬಣ್ಣ ಹಚ್ಚುವ ಸಮಯವು ಬಂದಿದೆ. ನಾವು ಪುಟ್ಟದಿರುವಾಗಲೂ ಆಕೆಗೆ ನಿದ್ದೆ ಇಲ್ಲ, ಆದ್ರೆ ಈಗಲೂ ಆಕೆಗೆ ನಿದ್ದೆ ಇಲ್ಲ, ರಾತ್ರಿ ವೇಳೆ ಪುಸ್ತಕ ಬಿಡಿಸಿ ಕುಳಿತಾಗ ನಮ್ಮ ಮುಂದೆ ತೂಕಾಡಿಸುತ್ತಾ ಕುಳಿತು ನಮ್ಮನ್ನು ಕಾಯುತ್ತಾಳೆ.

 

ಅಮ್ಮ ಏನು ಸತ್ಯವಂತೆ ಅಲ್ಲ, ಆಕೆಯ ಬಾಯಲ್ಲಿ ಸತ್ಯದ ಸರಮಾಲೆಯೇ ಇದೆ. ಸುಳ್ಳು ಹೇಳುವಾಗಲೂ ಅಷ್ಟೇ ನಾವುನಂಬುವಂತೆಯೇ ಹೇಳುತ್ತಾಳೆ. ಸುಳ್ಳಿನಲ್ಲಿಯೂ ತನ್ನ ಕಂದಮ್ಮನಗಾಗಿ ಮಾಡುವ ತ್ಯಾಗವು ಇಂದು ಕಣ್ಣೀರು ತರಿಸುತ್ತದೆ. ನಾವು ಬೆಳೆದು ದೊಡ್ಡೋರಾದರೂ ಆಕೆ ಇನ್ನು ತಟ್ಟೆಯಲ್ಲಿ ಬಿಸಿ ಬಿಸಿ ಊಟ ಬಡಿಸಿ ಕೈ ತುತ್ತು ಕೊಡುತ್ತಾಳೆ.
ಸಾವಿರಾರು ಕನಸುಗಳನ್ನು ಹೊತ್ತು ಬದುಕುವ ತಾಯಿ ಇಂದು ಸೊರಗಿ ಹೋಗಿದ್ದಾಳೆ.

ಮಗು ಬೆಳೆದು ನಿಂತಾಗ ಇನ್ನು ಬೇರೆಯೇ ಚಿಂತೆ ಆಕೆಗೆ ಕಾಡತೊಡಗಿದೆ. ತಾನು ಒಂದು ಹೆಣ್ಣಾಗಿ ಆಕೆಗೆ ಹೆಣ್ಣಿನ ಜೀವನದ ಏರುಪೇರುಗಳು ತಿಳಿದಿದೆ. ಮುಂದೆ ಜೀವನದಲ್ಲಿ ಬರಬಹುದಾದ ವಿಚಾರಧಾರೆಗಳು ಆಕೆಗೆ ತಿಳಿದಿದೆ. ಅದಕ್ಕಾಗಿ ನಮ್ಮನ್ನ ಇನ್ನು ಬಲಿಷ್ಟವಾಗಿ ಮಾಡಿರುತ್ತಾಳೆ. ಪ್ರತಿ ಮಾತಿನಲ್ಲಿಯೂ ಆಕೆಯ ಜೀವನದಲ್ಲಿ ಆಕೆ ಅನುಭವಿಸಿದ ನೋವಿನ ಕಥೆ ಇರುತ್ತೆ. ಆ ನೋವಿನ ಜೀವನ ತನ್ನ ಕೂಸಿಗೆ ಬದಗಿ ಬರಬಾರದು ಅನ್ನುವುದೇ ಆಕೆಯ ಮನದ ಆಶಯ.

ಹೆಣ್ಣು ತನ್ನ ಮನೆಯ ಮಗಳಾಗಿ ಕೊನೆಗಳಿಗೆವರೆಗೆ ಇರಬೇಕೆಂಬ ಆಸೆ ಆಕೆಯ ಮನದಾಳದಲ್ಲಿ ಹುದುಗಿರುತ್ತೆ, ಆದರೆ ಆಕೆಗೆ ಗೊತ್ತು ತನ್ನ ಮಗಳು ಇನ್ನೊಂದು ಮನೆ ಬೆಳಗುವ ದೇವತೆಯಾಗಿರ್ತಾಳೆ ಅಂತ. ಆ ಗಳಿಗೆಗಾಗಿ ಕಷ್ಟಪಟ್ಟು ಹಣವನ್ನು ಕೂಡಿಡ್ತಾಳೆ. ಈಗ ಅಮ್ಮ 4 ಗೋಡೆಗಳ ನಡುವೆ ಮಾತನಾಡೋದನ್ನ, ಕಣ್ಣೀರು ಹಾಕೋದನ್ನ ಚೆನ್ನಾಗಿ ಕಳಿತುಕೊಂಡಿದ್ದಾಳೆ. ಎಷ್ಟೇ ಬಾರಿ ಕಣ್ಣು ಕೆಂಪು ಮಾಡಿಕೊಂಡಾಗ ಏನಾಯಿತು ಅಂತ ಕೇಳಿದ್ರೆ ನಾವು ನಂಬೋ ಹಾಗೇನೆ ಕಣ್ಣಿಗೆ ಕಸ ಬಿತ್ತು ಅಂತಾಳೆ, ನಾವು ಆ ಮಾತಿಗೆ ಪ್ರತಿಯುತ್ತರ ನೀಡದೆ ಸುಮ್ಮನಾಗ್ತೀವಿ ಅಲ್ವ.

ಇನ್ನು ಮಗಳನ್ನು ಮಾತ್ರವಲ್ಲದೆ, ತನ್ನ ಮಗ ದೂರದ ದೇಶಕ್ಕೋ ಊರಿಗೋ ಉದ್ಯೋಗಕ್ಕೆ ಹೋದಾಗ ಅಲ್ಲಿ ಹೇಗಿರುತ್ತಾನೋ, ಸರಿಯಾಗಿ ಊಟ ಮಾಡಿದ್ದಾನೋ ಇಲ್ಲವೋ, ಎಂಬ ಚಿಂತೆ ನಿಮಿಷ ನಿಮಿಷದಲ್ಲಿ ಆಕೆಯನ್ನು ಆವರಿಸಿ ಬಿಡುತ್ತೆ. ಆದರೆ ದಿನಕೆಲಸವೆಂಬ ಕಾರ್ಯದಲ್ಲಿ ಆಕೆ ಅದನ್ನು ಬೇರೆಯವರ ಮುಂದೆ ತೋರಿಸಲ್ಲ. ಮಗನ ಕರೆಗೋಸ್ಕರ ಆಕೆ ಜಾತಕ ಪಕ್ಷಿಯಂತೆ ಕಾದುಕುಳಿತುಕೊಳ್ಳುತ್ತಾಳೆ. ಮಗ ಆಳೆತ್ತರ ಆದರೂ ಅವನ ಅಳು ಆಕೆಯಲ್ಲೂ ಅಳು ತರಿಸುತ್ತೆ.

ಅಮ್ಮ ಇನ್ನು ಒಂಟಿಯಾಗಿ ಮನೆಯಲ್ಲಿ ಇರ್ಬೇಕು. ಯಾಕೆ ಅಂದರೆ ಮೊನ್ನೆ ತಾನೆ ಮಡಿಲಲ್ಲಿ ಜೋಗುಲ ಹಾಡಿ ಬೆಳೆಸಿದ ಮಗು ಮದುವೆ ಮಂಟಪದಲ್ಲಿ ಮದುಮಗಳಾಗಿ ನಿಂತಿದ್ದಾಳೆ. ಮೂರು ಗಂಟಿನ ನಂಟಿನೊಂದಿಗೆ ಇನ್ನೊಂದು ಮನೆ ಮಗಳಾಗಲಿದ್ದಾಳೆ. ತಾಯಿಗೆ ಅತ್ತ ಇತ್ತ ಓಡಾಟದ, ಮದುವೆಯ ಸಂಭ್ರಮಕ್ಕಿಂತ ಹೆಚ್ಚಾಗಿ ಮಗಳ ಅಗಲುವಿಕೆಯ ನೋವು ಹೆಚ್ಚಿದೆ, ಆದರೆ ಆಕೆ ಅದನ್ನ ಯಾರಲ್ಲಿಯೂ ತೋರಿಸುತ್ತಿಲ್ಲ. ಮುದ್ದು ಮುಖದಲ್ಲಿ ನಗು ನಲಿದಾಡುತ್ತಾಳೆ ಇದೆ.
ಸಪ್ತಸದಿ ತುಳಿದು ಗಂಡನ ಮನೆ ಸೇರುವ ಆ ಶುಭ ಗಳಿಗೆ, ಅಮ್ಮನ ಕಣ್ಣುಗಳು ನೀರು ತುಂಬಿದ ಕೊಳದಂತಾಗಿದೆ. ತನ್ನ ಮಗಳನ್ನ ಗಟ್ಟಿಯಾಗಿ ತಬ್ಬಿ ಬಿಕ್ಕಿ ಬಿಕ್ಕಿ ಅಳಬೇಕೆನಿಸುತ್ತಿದೆ, ಆದರೆ ತನ್ನ ಮಗು ನಗುನಗುತ್ತ ಗಂಡನ ಮನೆ ಸೇರಬೇಕು ಅನ್ನೋದು ಆಕೆಯ ಮನದ ಆಸೆ. ಅದಕ್ಕಾಗಿ ಆ ದುಃಖಕ್ಕೆ ಸದ್ಯಕ್ಕೆ ಮನದಿಂದ ದೂರವೇ ಇರಿಸಿದ್ದಾಳೆ.

ಎಲ್ಲಾ ಕಾರ್ಯ ಮುಗಿದು ಮನೆ ಖಾಲಿ ಖಾಲಿಯಾಗಿದೆ, ಈಗ ಅಮ್ಮನಿಗೆ ಏನು ಕೆಲಸವಿಲ್ಲ ಮನೆಯ ಒಂದು ಮೂಲೆಯಲ್ಲಿ ಕುಳಿತು ಕಣ್ಣೀರು ಹಾಗುತ್ತಾಳೆ. ಆದ್ರೆ ಈಗಲೂ ಆಕೆಗೆ ಆಸರೆಯಾಗಿ ಜೊತೆಯಾಗಿ ಇರೋದು ಆಕೆಯ ಸೆರಗೆ, ಹೌದು ಅಮ್ಮ ಮುದ್ದು ಮುಖದ ಅಮ್ಮ ತನ್ನ ನೋವನ್ನು ಯಾರಲ್ಲಿಯು ಯಾವುದನ್ನು ಹೇಳಿಕೊಳ್ಳುತ್ತಿಲ್ಲ. ಆಕೆಯ ನಗು ಮುಖವೇ ನಮಗೆ ಎಲ್ಲವನ್ನು ತಿಳಿಸುತ್ತದೆ.

ಮುದ್ದು ಮುಖ ಅಮ್ಮನ ನೋವು ಆಕೆಯ ನಗುವಿನ ಹಿಂದೆ ಅಡಗಿದೆ. ಆಕೆಯ ಪ್ರೀತೆಗೆ ಬೆಲೆ ಕಟ್ಟಳಾಗದು. ನಮ್ಮ ಜೀವನದಲ್ಲಿ ಯಾವುದೆ ಮತ್ಸರವಿಲ್ಲದೆ ಇರುವ ಜೀವ ಅಂದ್ರೆ ಅದು ತಾಯಿ. ಆಕೆಗೆ ಕೋಟಿ ಎಷ್ಟು ಚಿರಋಣಿಯಾಗಿದ್ದರೂ ಕಡಿಮೇನೇ, ಮುದ್ದು ಅಮ್ಮನ ಪ್ರೀತಿಗೆ ಮುದ್ದು ಮಕ್ಕಳ ಕೋಟಿ ನಮನ.

ಸುಮಿತ್ರಾ ಬಿ. ನಾಯ್ಕ, ಪೆರ್ನೆ