ಕುಕ್ಕೇ ಸುಬ್ರಹ್ಮಣ್ಯ ದಲ್ಲಿ ಮೇ 12 ಭಾನುವಾರ ಭಕ್ತಾದಿಗಳಿಂದ ತುಂಬಿ ತುಳುಕುತ್ತಿತ್ತು. ಎಲ್ಲಾ ವಸತಿ ಗ್ರಹಗಳು ತುಂಬಿಹೋಗಿದ್ದವು. ದೊಡ್ಡ ಸಂಖ್ಯೆ ಯಲ್ಲಿ ಭಕ್ತಾದಿಗಳು ಕುಕ್ಕೇ ಗೆ ಆಗಮಿಸಿ ಶ್ರೀ ಸುಬ್ರಹ್ಮಣ್ಯ ದೇವರ ಸೇವೆಯಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಜಮಖಂಡಿ ಶಾಸಕರದ ಆನಂದ ಸಿದ್ದು ನ್ಯಾಮೇ ಗೌಡ ಹಾಗು ಅವರ ತಾಯಿ, ಹಾಗು ಕುಟುಂಬ ದವರು ಶ್ರೀ ಸುಬ್ರಹ್ಮಣ್ಯ ಮಠದ ಆವರಣದಲ್ಲಿ ಆಶ್ಲೇಷ ಬಲಿ ಪೂಜೆ ಸುಬ್ರಹ್ಮಣ್ಯ ಶಿಬರಾಯ ರವರ ಪೌರೋಹಿತ್ಯದಲ್ಲಿ ನಡೆಯಿತು.
ಪುತ್ತೂರು ಮಾಜಿ ಶಾಸಕರಾದ ಶ್ರೀಮತಿ ಶಕುಂತಲಾ ಶೆಟ್ಟಿ ಹಾಗು ಅವರ ಜೊತೆಗೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಆಳ್ವ, ಮಹಮದ್ ಬಡಗನ್ನೂರು, ಕೆ. ಪಿ.ಸಿ. ಸಿ ಸದಸ್ಯ ಎಮ್. ಬಿ. ವಿಶ್ವನಾಥ್ ರೈ ಕೂಡ ಆಗಮಿಸಿದ್ರು. ಗಂಗಾಧರ್ ಎಲಿಕ್ಕ, ಶ್ರೀ ಸುಬ್ರಹ್ಮಣ್ಯ ಮಠಕ್ಕೆ ಆಗಮಿಸಿ ಶಾಸಕ ಆನಂದ್ ನ್ಯಾಮೇ ಗೌಡ ಅವರನ್ನು ಸ್ವಾಗತ ಮಾಡಿ ಜೊತೆಗೆ ಪೂಜೆಯಲ್ಲಿ ಪಾಲ್ಗೊಂಡರು.
ನಂತರ ಮಾತನಾಡಿದ ಶ್ರೀಮತಿ ಶಾಕುಂತಲ ಶೆಟ್ಟಿ ಯವರು ನಾನು ಭಾನುವಾರ ಸ್ವಲ್ಪ ಬಿಡುವು ಆದ್ದರಿಂದ ಕೈ ಮುಗಿದು ಹೋಗುವ ಎಂದು ಬಂದೆ ಹೇಳಿದರು ಕರ್ನಾಟಕ ಸರಕಾರಕ್ಕೆ ಒಳ್ಳೆದಾಗಲಿ, 23ಕ್ಕೇ ಲೋಕಸಭಾ ಮತ ಎಣಿಕೆ ಯಲ್ಲಿ ನಮ್ಮ ಸರಕಾರ ಬರಲಿ ಕೇಂದ್ರ ನಮ್ಮ ಕೈಗೆ ಕೊಟ್ಟು ಜನರಿಗೆ ಒಳ್ಳೆ ಸಂದೇಶ ಹೋಗಲಿ ಎಂಬ ಉದ್ದೇಶ ದಿಂದ ಬಂದಿದ್ದೇವೆ ಎಂದು ಹೇಳಿದರು