ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾ ಕಮಾಡೆಂಟ್ ಡಾ|| ಮುರಲೀ ಮೋಹನ್ ಚೂಂತಾರು ಸುಳ್ಯ ಗೃಹರಕ್ಷಕ ದಳ ಘಟಕಕ್ಕೆ ಭೇಟಿ ನೀಡಿ ಕವಾಯತು ವೀಕ್ಷಣೆ ನಡೆಸಿದರು.
ನಂತರ ಕುಂದುಕೊರತೆಗಳ ಸಭೆ ನಡೆಸಿ ಮಾತನಾಡಿದ ಅವರು ಕೇರಳ ರಾಜ್ಯ ಹಾಗೂ ಕರ್ನಾಟಕ ರಾಜ್ಯ ಚುನಾವಣಾ ಕರ್ತವ್ಯದಲ್ಲಿ ಭಾಗವಹಿಸಿದ ಘಟಕದ ಎಲ್ಲಾ ಗೃಹರಕ್ಷಕರಿಗೆ ಅಭಿನಂದನೆ ಸಲ್ಲಿಸಿದರು ಹಾಗೂ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಘಟಕಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಸರಕಾರದ ವತಿಯಿಂದ ಕೊಡಿಸುವ ಬಗ್ಗೆ ಭರವಸೆ ನೀಡಿದರು. ಅದಲ್ಲದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಹಾಗೂ ಇತರ ಸರಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಗೃಹರಕ್ಷಕರಿಗೆ ತಲಾ 3ತಿಂಗಳಿಗೊಮ್ಮೆ ಸೇವಾ ಕ್ಷೇತ್ರದಲ್ಲಿ ಕಡ್ಡಾಯವಾಗಿ ಬದಲಾವಣೆ ನೀತಿ ಜಾರಿಗೊಳಿಸಲಾಗುವುದು ಇದು ಹೊಸತನಕ್ಕೂ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ಹೇಳಿದರು
ಪ್ರವಾಹ ರಕ್ಷಣಾ ತಂಡ ರಚನೆ ಹಾಗೂ ಕಂಟ್ರೋಲ್ ರೂಂ ಸ್ಥಾಪನೆ
ಮುಂಬರುವ ಮುಂಗಾರು ಮಳೆಗಾಲ ಸಮಯಕ್ಕೆ ಕರ್ತವ್ಯ ನಿರ್ವಹಿಸಲು ಗೃಹರಕ್ಷಕರ ಕಂಟ್ರೋಲ್ ರೂಂನ್ನು ಸುಳ್ಯ ಘಟಕದ ಕಚೇರಿಯಲ್ಲಿ ಸ್ಥಾಪನೆ ಮಾಡಿ ಎಂದು ಕಮಾಡೆಂಟ್ ಸುಳ್ಯ ಘಟಕದ ಘಟಕಾಧಿಕಾರಿ ಜಯಂತ್ ಶೆಟ್ಟಿ ಹಾಗೂ ಘಟಕದ ಸಾಚೆರ್ಂಟ್ ಅಬ್ದುಲ್ ಗಫೂರ್‍ರವರಿಗೆ ತಿಳಿಸಿದರು. ಮುಂಬರುವ ಮಳೆಗಾಲದ ಸಮಯದಲ್ಲಿ ಪ್ರಕೃತಿ ವಿಕೋಪ ಸಮಯದಲ್ಲಿ ಕರ್ತವ್ಯ ನಿರ್ವಹಿಸಲು ಸುಳ್ಯ ಘಟಕದ ಗೃಹರಕ್ಷಕ ಸಿಬ್ಬಂದಿಗಳ ನುರಿತ ಪ್ರವಾಹ ರಕ್ಷಣಾ ತಂಡವನ್ನು ರಚಿಸಿದರು.
ಗೃಹ ರಕ್ಷಕರು ಪ್ರಕೃತಿ ವಿಕೋಪ ಸಮಯದಲ್ಲಿ ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧರಾಗಿ ಕಳೆದ ಬಾರಿ ಸುಳ್ಯದ ಜೋಡುಪಾಲ ಸಹಿತ ತಾಲೂಕಿನ ವಿವಿಧ ಭಾಗಗಳಲ್ಲಿ ಮಳೆಯಿಂದ ಸಾಕಷ್ಟು ಹಾನಿ ಉಂಟಾಗಿದ್ದು ಗೃಹರಕ್ಷಕ ಸಿಬ್ಬಂದಿಗಳು ಬಹಳ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಈ ಬಾರಿಯೂ ಯಾವುದೇ ಘಟನೆಗಳು ನಡೆದರೂ ಅದನ್ನು ಎದುರಿಸಲು ಪ್ರತಿಯೊಬ್ಬ ಗೃಹರಕ್ಷಕರು ಸಿದ್ಧತೆಯಿಂದ ಇರಲು ಮುರಲೀ ಮೋಹನ್ ಕರೆ ನೀಡಿದರು
ಈ ಸಂದರ್ಭದಲ್ಲಿ ಸುಳ್ಯ ಘಟಕದ ಘಟಕಾಧಿಕಾರಿ ಜಯಂತ ಶೆಟ್ಟಿ, ಕಚೇರಿ ಕಾರ್ಯ ನಿರ್ವಾಹಕ ಅಬ್ದುಲ್ ಗಫೂರ್, ಕವಾಯತು ನಾಯಕರುಗಳಾದ ಕೆ ಅಶ್ವತ್ ಪ್ರಸಾದ್, ಬಿ ಗೋಪಾಲ್ ಮುಳುಗು ತಜ್ಞ ಪ್ರಭಾಕರ ಪೈ ಹಾಗೂ ಘಟಕದ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು