ಕಳೆದ ಮಳೆಗಾಲದಲ್ಲಿ ವಿಪರೀತ ಮಳೆಯ ಕಾರಣ ತಮ್ಮ ಮನೆಯನ್ನು ಕಳೆದುಕೊಂಡ ಉರ್ವ ನಿವಾಸಿ ಗೀತ ಎಂಬುವವರಿಗೆ ಬಿಜೆಪಿ ಕಾರ್ಯಕರ್ತರು ಹಾಗೂ ದಾನಿಗಳ ಸಹಾಯದಿಂದ ನೂತನ ಮನೆ ನಿರ್ಮಿಸಿಕೊಟ್ಟಿದ್ದಾರೆ.
ನೂತನ ಮನೆಗೆ ‘ಅಟಲ್ ನಿಲಯ’ ಎಂದು ನಾಮಕರಣ ಮಾಡಿದ್ದಾರೆ. ಇದರ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ವೇದವ್ಯಾಸ್ ಕಾಮತ್ ಭಾಗವಹಿಸಿದರು. ಪಕ್ಷದ ಮುಖಂಡರು, ಕಾರ್ಯಕರ್ತರು, ಹಿತೈಷಿಗಳು ಜೊತೆಗಿದ್ದರು.