Recent Posts

Sunday, January 19, 2025
ಸುದ್ದಿ

ಸಾಮರಸ್ಯ ನಡಿಗೆ ನಾಟಕ: ರೈ ವಿರುದ್ಧ ಕಲ್ಲಡ್ಕ ಪ್ರಭಾಕರ್ ಭಟ್ ವಾಗ್ದಾಳಿ

 

Highlights :
ರಮಾನಾಥ್ ರೈ ಬಾಯಿ ಬಿಟ್ರೆ ಬರೀ ಸುಳ್ಳು ಮಾತನಾಡುವ ಮನುಷ್ಯ.  ಸಾಮರಸ್ಯ ಅಂತ ಹೇಳೋ ಅವರು ಕಲ್ಲಡ್ಕದಲ್ಲಿ ಗಲಾಟೆಯಾದಾಗ ಯಾಕೆ ಬಂದಿಲ್ಲ? ಕ್ಷೇತ್ರದಲ್ಲಿ ಮೂರ್ನಾಲ್ಕು ಜನರ ಹತ್ಯೆಯಾದ್ರೂ ಇನ್ನೂ ಯಾಕೆ ರಾಜೀನಾಮೆ ಕೊಟ್ಟಿಲ್ಲ ಎಂದು ಕಲ್ಲಡ್ಕ ಪ್ರಭಾಕರ ಭಟ್ಟರು ರಮಾನಾಥ್ ರೈ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು : ರಮಾನಾಥ್ ರೈ ಬಾಯಿ ಬಿಟ್ರೆ ಬರೀ ಸುಳ್ಳು ಮಾತನಾಡುವ ಮನುಷ್ಯ.  ಸಾಮರಸ್ಯ ಅಂತ ಹೇಳೋ ಅವರು ಕಲ್ಲಡ್ಕದಲ್ಲಿ ಗಲಾಟೆಯಾದಾಗ ಯಾಕೆ ಬಂದಿಲ್ಲ? ಕ್ಷೇತ್ರದಲ್ಲಿ ಮೂರ್ನಾಲ್ಕು ಜನರ ಹತ್ಯೆಯಾದ್ರೂ ಇನ್ನೂ ಯಾಕೆ ರಾಜೀನಾಮೆ ಕೊಟ್ಟಿಲ್ಲ ಎಂದು ಕಲ್ಲಡ್ಕ ಪ್ರಭಾಕರ ಭಟ್ಟರು ರಮಾನಾಥ್ ರೈ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಿನ್ನೆ ಕಲ್ಲಡ್ಕಕ್ಕೆ ಅವರ ಯಾತ್ರೆ ಬರುವಾಗ 300-400 ಜನ ಪೊಲೀಸರನ್ನು ನಿಯೋಜನೆ ಮಾಡಿದ್ದಾರೆ. ಅವರು ನಡೆದ್ರು ಅಂತ ಸುಳ್ಳು ಹೇಳಿದ್ದಾರೆ. ಕಾರಲ್ಲಿ ಬಂದು ಸ್ವಲ್ಪ ನಡೆದಿದ್ದಾರೆ ಅಷ್ಟೇ.  ಕಲ್ಲಡ್ಕ ಹೋಟೆಲ್’ನಲ್ಲಿ ಕಾಫಿ ಕುಡಿದು ಅವರು  ಪ್ರಕಾಶ್ ರೈ ಕಾರಲ್ಲಿ ಹೋಗಿದ್ದಾರೆ.  ಯಾತ್ರೆ ಆರಂಭದಲ್ಲಿ, 500 ಜನ ಇದ್ದರೆ ಮತ್ತೆ ಇದ್ದುದ್ದು 200 ಜನರಂತೆ.  ಅವರ ಯಾತ್ರೆ ಯಶಸ್ವಿಯಾಗಿದೆ ಅನ್ನೋದು ಬಿಡಿ.  ಕಳೆದ ನಾಲ್ಕೂವರೆ ವರ್ಷದಲ್ಲಿ ಯಾಕೆ ನೆನಪಾಗಲಿಲ್ಲ.  ಸಾಮರಸ್ಯ ನಡಿಗೆ ಅನ್ನೋದು ನಾಚಿಕೆ ಮತ್ತು ನಾಟಕ. ನಾನು ಗೋಹತ್ಯೆ, ಲವ್ ಜಿಹಾದ್ ವಿರೋಧಿಸುವುದು ರೈಗೆ ಕಣ್ಣು ಕುಕ್ಕುತ್ತಿದೆ.  ನನ್ನ ಮೇಲೆ ಅವರಿಗೆ ವೈಯಕ್ತಿಕವಾಗಿ ಏನೂ ಇಲ್ಲ ಎಂದು  ಸುವರ್ಣ ನ್ಯೂಸ್’ಗೆ ಆರ್’ಎಸ್’ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.

Leave a Response