Sunday, January 19, 2025
ಅಂಕಣ

‘ಭಾರತ ಜನನಿ ‘ಕಟ್ಟೆತ್ತಿಲ ಗೋಪಾಲಕೃಷ್ಣ ಭಟ್ ಅವರ ಶ್ರೀಗುರುಪಾದಪದ್ಮ ಸರಣಿ – 37

ಭಾರತ ಮಾತೆಯ ಮಕ್ಕಳು ನಾವು
ಸಹೋದರರಂತೆ ನಾವೆಲ್ಲ
ಹಿಂದೂ ಕ್ರೈಸ್ತ ಮುಸಲ್ಮಾನ
ಭೇದ ಭಾವವು ನಮಗಿಲ್ಲ

ಬಾರೆ ಬಾರೆ ಕನ್ನಡತಿ
ಶಾಲೆಗೆ ಬರಲಿ ನಿನ ಗೆಳತಿ
ಕೂಡಿ ಕಳೆ ಬಾಗಿಸಿ ಗುಣಿಸಿ
ಆಗು ನೀ ಜಗದೊಡತಿ

ಜಾಹೀರಾತು
ಜಾಹೀರಾತು
ಜಾಹೀರಾತು

ಕನ್ನಡವೆಂಬುದು ಕಗ್ಗಂಟಲ್ಲ
ಜನರಲಿ ತಂದಿದೆ ಒಗ್ಗಟು
ಕನ್ನಡಿಯೊಳಗಿನ ಸಹಜತೆಯಂತೆ
ಮನುಜಗೆ ಮಮತೆಯ ಒಳಗುಟ್ಟು

ಜಾಹೀರಾತು
ಜಾಹೀರಾತು
ಜಾಹೀರಾತು

ಬಾಳಿಗೆ ಭಾವದ ಜ್ಯೋತಿಯು ನೀನು
ಕನ್ನಡ ಕಲಿಯದೆ ಬೆಳಗುವುದೇನು
ಭಾರತ ಜನನಿ‌ ಕರುಣೆಯ ಕಡಲು
ಕನ್ನಡ ಕುವರಿಗೆ ಪ್ರೀತಿಯಾ ಮಡಿಲು

ಕುಡಿದರು ಸಾಕದು ಪ್ರತಿದಿನ ಗಂಜಿ
ಬದುಕದಿರು ನೀ ಪರರರಿಗೆ ಅಂಜಿ
ಸಾವಿರ ಪೆಟ್ಡನು ಸಹಿಸಿದ ಚಿನ್ನವು
ಹೊಳೆ ಹೊಳೆವುದು ತಾ ಅಪರಂಜಿ

ಗಂಧದ ಕೊರಡದು ತಾ ಸವೆಸವೆದು
ಕಂಪನು ಹೊರಹೊರ ಸೂಸುವುದು
ದೇವದ ಪೂಜೆಗೆ ಕರ್ಪುರವು ತಾ
ಉರಿದೇ ಜ್ಯೊತಿಯ ಬೆಳಗುವುದಯ.

ಅಕ್ಷರವಿರುವುದು ಕನ್ನಡದಿ
ಪುನಕ ಬರೆದವು ಕನ್ನಡದಿ
ಪತ್ರವ ಬರೆವುದು ಕನ್ನಡ
ಮಿತ್ರರ ಕರೆವುದು ಕನ್ನಡಿ

ಗಾಂದಿಯು ಹುಟ್ಟಿದ ನಮ್ಮೀ ದೇಶ
ಮೋದಿಯ‌‌ ಸೊಬಗಿನ ತವರೂರು
ನಾಲ್ವ ಕೃಷ್ಣ ರಾಬರ‌ ಮನೆತನ
ಇಡಿ ವಿಶ್ವವೆ ತಿಳಸಿ ದೆ ನಮ್ಮ ಗೆಳೆತನ

Leave a Response