Sunday, January 19, 2025
ಸುದ್ದಿ

ರಮಾನಾಥ ರೈ ನರಿ ಬುದ್ದಿ ಬಹಿರಂಗ | ಕರಾವಳಿಯಲ್ಲಿ ಮಕ್ಕಳ ಅನ್ನ ಕಿತ್ತು ಬೆತ್ತಲಾದ ಸಚಿವ ರೈ

 

ಮಂಗಳೂರು: ಆರ್‌ಎಸ್‌ಎಸ್ ಮುಖಂಡ ಡಾ.ಪ್ರಭಾಕರ್ ಭಟ್ ಅವರ ನೇತೃತ್ವದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಮತ್ತು ಪುಣಚ ಶ್ರೀ ದೇವಿ ವಿದ್ಯಾಕೇಂದ್ರ ಶಾಲೆಗಳಿಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಿಂದ ಮಕ್ಕಳಿಗೆ ಬರುತ್ತಿದ್ದ ಬಿಸಿಯೂಟವನ್ನು ಏಕಾಏಕಿ ನಿಲ್ಲಿಸಿದ್ದರ ಹಿಂದಿನ ಕಾರಣ ಏನು ಎಂಬುದು ಈಗ ಸಾಕ್ಷಿ ಸಮೇತ ಬಹಿರಂಗಗೊಂಡಿದೆ.
ದಕ್ಷಿಣ ಕನ್ನಡ ಉಸ್ತುವಾರಿ ಸಚಿವರಾಗಿರುವ ರಮಾನಾಥ ರೈಯವರೇ ರಾಜ್ಯ ಸರ್ಕಾರಕ್ಕೆ ಪತ್ರವನ್ನು ಬರೆದು ದೇಗುಲದ ವತಿಯಿಂದ ಶ್ರೀರಾಮ ಶಾಲೆಗಳಿಗೆ ಕೊಲ್ಲೂರು ವತಿಯಿಂದ ನೀಡಲಾಗುತ್ತಿದ್ದ ನೆರವನ್ನು ಸ್ಥಗಿತಗೊಳಿಸಿದ್ದಾರೆ. ಅವರು ಬರೆದ ಪತ್ರವನ್ನು ಬಿಜೆಪಿ ಮುಖಂಡ ಹರಿಕೃಷ್ಟ ಬಂಟ್ವಾಳ ಅವರು ಪ್ರತಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಮಾನಾಥ ರೈಯವರು ತಾನು ಈ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂದು ಮಾಧ್ಯಮದ ಮುಂದೆ ಈ ಹಿಂದೆ ಹೇಳಿದ್ದರು. ಆದರೆ ಇದೀಗ ಅವರು ಸ್ವತಃ ಸರಕಾರಕ್ಕೆ ಮಕ್ಕಳ ಅನ್ನ ಭಾಗ್ಯವನ್ನು ನಿಲ್ಲಿಸುವಂತೆ ಆಗ್ರಹಿಸಿ ಬರೆದ ಪತ್ರ ಲಭಿಸಿದೆ. ಇದರಿಂದ ಅವರ ನೈಜ ಮುಖ ಜನತೆ ಮುಂದೆ ತೆರೆದುಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response