Wednesday, January 22, 2025
ಸುದ್ದಿ

ಕಮಲಹಾಸನ್ ವಿವಾದಾತ್ಮಕ ಹೇಳಿಕೆ ಮತ್ತೊಂದು ಟ್ವಿಸ್ಟ್ – ಕಹಳೆ ನ್ಯೂಸ್

ಚುನಾವಣಾ ಪ್ರಚಾರದ ವೇಳೆ ‘ಗಾಂಧೀಜಿಯನ್ನು ಹತ್ಯೆಗೈದಿದ್ದ ನಾಥುರಾಮ್ ಗೋಡ್ಸೆ ಮೊದಲ ಹಿಂದು ಉಗ್ರ’ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ಮಕ್ಕಳ್ ನೀಧಿ ಮಯ್ಯಂ ಪಕ್ಷದ ಸಂಸ್ಥಾಪಕ ಕಮಲಹಾಸನ್ ಇದೀಗ ಹೊಸ ಹೇಳಿಕೆಯನ್ನ ನೀಡಿದ್ದಾರೆ.

ನಾನು ಐತಿಹಾಸಿಕ ಸತ್ಯವನ್ನೇ ಹೇಳಿದ್ದೇನೆ ಹೊರತು ಯಾರೊಂದಿಗೂ ಜಗಳವಾಡಲು ನಾನು ಆ ರೀತಿ ಹೇಳಿಲ್ಲ. ಮಾಧ್ಯಮಗಳ ವಿರುದ್ಧವೂ ಆಕ್ರೋಶ ಹೊರ ಹಾಕಿದ ಕಮಲ ಹಾಸನ್ ‘ನನ್ನ ಹೇಳಿಕೆಯನ್ನು ವಿಚಾರದ ಹೊರಗೆ ಕೊಂಡೊಯ್ಯಲಾಗಿದೆ’, ‘ನಾನೇನು ಹೇಳಿದ್ದೇನೋ ಅದರ ತಲೆ ಮತ್ತು ಬಾಲವನ್ನು ಕತ್ತರಿಸಿ ಬರೀ ಒಂದು ಭಾಗವನ್ನು ಮಾತ್ರ ಬಿತ್ತರಿಸಲಾಗಿದೆ. ನನ್ನ ಹೇಳಿಕೆಯನ್ನು ತಿರುಚಿ ಆಕ್ರೋಶ ಹೊರಹೊಮ್ಮುವಂತೆ ಮಾಡಲಾಗಿದೆ. ಯಾವೆಲ್ಲಾ ಐಪಿಸಿ ಸೆಕ್ಷನ್‍ಗಳಿವೆ ಅವುಗಳೆಲ್ಲವನ್ನೂ ನನ್ನ ಮೇಲೆ ಹಾಕಲಾಗಿದೆ. ಮಾಧ್ಯಮಗಳೂ ಕೂಡ ಇದಕ್ಕೆ ಸಮಾನ ಹೊಣೆಯಾಗುತ್ತಾರೆ’ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಕ್ಕಳ್ ನೀಧಿ ಮಯ್ಯಂ ಜಾತಿ, ವರ್ಣ, ಧರ್ಮವನ್ನು ಪರಿಗಣಿಸದೆ ಎಲ್ಲಾ ವರ್ಗದವರಿಗೂ ಸಮಾನ ಗೌರವ ನೀಡುವುದೇ ನಮ್ಮ ಪಕ್ಷದ ಗುರಿಯಾಗಿದೆ ಎಂದರು.ನನ್ನ ಮನೆಯಲ್ಲೂ ಎಲ್ಲರೂ ದೇವರನ್ನು ಪ್ರಾರ್ಥಿಸುತ್ತಾರೆ. ನನ್ನ ಮಗಳು ಕೂಡ ದೈವ ಭಕ್ತೆ ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು