Tuesday, January 21, 2025
ಸುದ್ದಿ

ವಿಚಿತ್ರವಾಗಿ ಸಾವನ್ನಪ್ಪಿದ ಉತ್ತರಪ್ರದೇಶದ ಮಹಿಳೆ – ಕಹಳೆ ನ್ಯೂಸ್

ಬಾಯಿಗೆ ಹಾಕಿದ್ದ ಆಕ್ಸಿಜನ್ ಪೈಪ್ ಸ್ಫೋಟಗೊಂಡು ಮಹಿಳೆ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಅಲಿಗಢ್‍ನಲ್ಲಿ ನಡೆದಿದೆ. ವಿಷ ಸೇವನೆಯ ಹಿನ್ನೆಲೆ ಮಹಿಳೆಯನ್ನು ಚಿಕಿತ್ಸೆಗೆಂದು ಜೆ.ಎನ್ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು.

ಮಹಿಳೆಯನ್ನು ದಾಖಲಿಸಿಕೊಂಡ ಆಸ್ಪತ್ರೆ ಸಿಬ್ಬಂದಿ, ಆಕೆಯ ದೇಹದಲ್ಲಿ ಸೇರಿದ್ದ ವಿಷವನ್ನು ಹೊರ ತೆಗೆಯಲು ಆಕ್ಸಿಜನ್ ಪೈಪ್ ಬಾಯಿಯ ಮೂಲಕ ಹೊಟ್ಟೆಗೆ ಸೇರಿಸಿದ್ದಾರೆ. ಈ ಸಮಯದಲ್ಲಿ ಬಾಯಿ ಸ್ಫೋಟಗೊಂಡಿದ್ದು ಆಕೆ ಸಾವನ್ನಪ್ಪಿದ್ದಾಳೆ. ಈ ದೃಶ್ಯ ಕೊಠಡಿಯಲ್ಲಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಸಲ್ಫೂರಿಟ್ ಆಸಿಡ್ ಸೇವಿಸಿದ್ದಳಂತೆ. ಚಿಕಿತ್ಸೆಗೆಂದು ಆಕ್ಸಿಜನ್ ಪೈಪ್ ಸೇರಿಸಿದಾಗ, ಸಲ್ಫೂರಿಟ್ ಆಸಿಡ್ ಮತ್ತು ಆಕ್ಸಿಜನ್ ಎರಡರ ನಡುವೆ ನಡೆದ ರಸಾಯನಿಕ ಕ್ರೀಯೆಯಿಂದ ಮಹಿಳೆ ಬಾಯಿ ಸ್ಫೋಟಗೊಂಡಿದೆ ಅಂತಾ ವೈದ್ಯರು ತಿಳಿಸಿದ್ದಾರೆ. ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಇನ್ನೂ ಕಾರಣ ತಿಳಿದು ಬಂದಿಲ್ಲ. ಅಲ್ಲದೇ, ಮಹಿಳೆ ಸಲ್ಫೂರಿಟ್ ಆಸಿಡನ್ನೇ ಯಾಕೆ ಸೇವಿಸಿದ್ದಳು ಎನ್ನುವ ಮಾಹಿತಿ ತನಿಖೆಯಿಂದ ಮಾತ್ರ ತಿಳಿಯಬೇಕಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು