Tuesday, January 21, 2025
ಸುದ್ದಿ

ಶಾಹಿದ್ ಪ್ರತಿಮೆಯಲ್ಲಿ ಮೇಡಮ್ ಟುಸ್ಸಾಡ್ಸ್ ಮ್ಯಾಜಿಕ್ – ಕಹಳೆ ನ್ಯೂಸ್

ಬಾಲಿವುಡ್ ನಟ ಶಾಹಿದ್ ಕಪೂರ್ ಇಂದು ಸಿಂಗಪೂರ್‌ನ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ತಮ್ಮ ಮೇಣದ ಪ್ರತಿಮೆಯನ್ನ ಅನಾವರಣ ಮಾಡಿದ್ದಾರೆ. ಬೇರೆ ಸ್ಟಾರ್‌ಗಳ ವ್ಯಾಕ್ಸ್ ಸ್ಟ್ಯಾಚ್ಯೂಗಳಿಗೆ ಹೋಲಿಸಿದ್ರೆ ಶಾಹಿದ್‌ರ ಪ್ರತಿಮೆ ಕೃತಕ ಅಂತ ಅನ್ನಿಸೋದೇ ಇಲ್ಲ, ಅಷ್ಟು ರಿಯಾಲಿಸ್ಟಿಕ್ ಆಗಿ ಮಾಡಲಾಗಿದೆ. ಶಾಹಿದ್‌ರ ಮುಖಲಕ್ಷಣಗಳನ್ನ ಈ ಮೇಣದ ಪ್ರತಿಮೆಯಲ್ಲಿ ಅದ್ಭುತವಾಗಿ ಮೂಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರತಿಮೆಯ ಪಕ್ಕದಲ್ಲಿ ನಿಂತು ಫೋಟೋಗೆ ಪೋಸ್ ಕೊಟ್ಟಿರೋ ಶಾಹಿದ್ ಕಪೂರ್, ಈ ಚಿತ್ರಗಳನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಶಾಹಿದ್ ತಮ್ಮ ಮೇಣದ ಪ್ರತಿಮೆ ಸಿದ್ಧಗೊಳ್ತಿರೋ ಬಗ್ಗೆ ಟ್ವೀಟ್ ಮಾಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಪ್ರತಿಮೆ ಅನಾವರಣಗೊಳ್ಳಲಿದೆ, ಎಂದು ತಿಳಿಸಿದ್ದರು. ಮ್ಯಾಡಮ್ ಟುಸ್ಸಾಡ್ಸ್ ಸಿಂಗಪೂರ್ ಟ್ವಿಟರ್ ಅಕೌಂಟ್‌ನಲ್ಲಿ ಕೂಡ ಶಾಹಿದ್ ಫೋಟೋ ಶೇರ್ ಮಾಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಿಯಾಂಕಾ ಚೋಪ್ರಾ, ಅಮಿತಾಭ್ ಬಚ್ಚನ್, ಶಾರೂಖ್ ಖಾನ್, ಮಾಧುರಿ ದೀಕ್ಷಿತ್, ಕರೀನಾ ಕಪೂರ್, ಸಲ್ಮಾನ್ ಖಾನ್, ಐಶ್ವರ್ಯಾ ರೈ ಬಚ್ಚನ್, ವರುಣ್ ಧವನ್, ಕತ್ರೀನಾ ಕೈಫ್, ಹೃತಿಕ್ ರೋಷನ್ ಹಾಗೂ ಇನ್ನೂ ಮುಂತಾದ ಸ್ಟಾರ್‌ಗಳ ಮೇಣದ ಪ್ರತಿಮೆಗಳು ಕೂಡ ಮ್ಯೂಸಿಯಂನಲ್ಲಿ ಇವೆ. ಇನ್ನು ಇತ್ತೀಚೆಗಷ್ಟೇ ದೀಪಿಕಾ ಪಡುಕೋಣೆ ಕೂಡ ಮ್ಯಾಡಮ್ ಟುಸ್ಸಾಡ್ಸ್ನಲ್ಲಿ ತಮ್ಮ ಪ್ರತಿಮೆ ಅನಾವರಣ ಮಾಡಿದ್ದಾರೆ.