Monday, January 20, 2025
ಸುದ್ದಿ

ಗುಜರಾತ್‍ನಲ್ಲಿ ಬರ್ತ್‍ಡೇ ಪಾರ್ಟಿಗೆ ಬಿತ್ತು ಬ್ರೇಕ್ – ಕಹಳೆ ನ್ಯೂಸ್

ಗುಜರಾತ್: ಈಗ ಗುಜರಾತ್‍ನಲ್ಲಿ ಬರ್ತ್‍ಡೇ ಪಾರ್ಟಿ ಮೇಲೆ ಬ್ರೇಕ್ ಬಿದ್ದಿದೆ. ಬರ್ತ್‍ಡೇ ಸೆಲೆಬ್ರೇಷನ್ ವೇಳೆ ಸ್ನೇಹಿತರ ಮುಖಕ್ಕೆ ಕೇಕ್ ಬಳಿಯೋದು, ಫೋಮ್ ಸ್ಪ್ರೇ ಮಾಡೋದು ಕಾಮನ್ ಆಗಿದೆ. ಆದ್ರೆ ಗುಜರಾತ್‍ನಲ್ಲಿ ಇನ್ಮುಂದೆ ಇದನ್ನೆಲ್ಲಾ ಪಬ್ಲಿಕ್‍ನಲ್ಲಿ ಮಾಡಿದ್ರೆ ಅಂಥವರನ್ನ ಅರೆಸ್ಟ್ ಮಾಡಲಾಗುತ್ತೆ.

ಕಳೆದ ಸೋಮವಾರ ಸೂರತ್ ಪೊಲೀಸರು ಈ ಬಗ್ಗೆ ಆದೇಶ ಹೊರಡಿಸಿದ್ದು, ಸಾರ್ವಜನಿಕ ಸ್ಥಳದಲ್ಲಿ ಬಲವಂತವಾಗಿ ವ್ಯಕ್ತಿಯ ಮುಖಕ್ಕೆ ಕೇಕ್ ಬಳಿಯೋದು, ಫೋಮ್ ಅಥವಾ ಕೆಮಿಕಲ್ ಎಸೆಯೋದನ್ನ ಬ್ಯಾನ್ ಮಾಡಲಾಗಿದೆ. ಸಿಆರ್‍ಪಿಸಿ ಸೆಕ್ಷನ್ 144 ಅಡಿಯಲ್ಲಿ ಈ ಆದೇಶ ಜಾರಿ ಮಾಡಲಾಗಿದ್ದು. ಸಾರ್ವಜನಿಕ ವಸ್ತುಗಳಿಗೆ ಹಾನಿ ಉಂಟಾಗುವೂದನ್ನು ತಪ್ಪಿಸಲು ಹಾಗೂ ಬರ್ತ್ ಡೇ ಸೆಲೆಬ್ರೇಷನ್ ವೇಳೆ ವ್ಯಕ್ತಿಗೆ ಆಗುವ ಹಾನಿಯನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಈ ನಿಯಮವನ್ನು ಉಲ್ಲಂಘಿಸಿದವರನ್ನು ಅರೆಸ್ಟ್ ಮಾಡಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕೇಕ್ ಬಳಿಯೋದಕ್ಕೆ ನಿರ್ಬಂಧ ಹೇರಲಾಗಿದೆಯಾದ್ರೂ, ಈ ಆದೇಶವೂ ಪ್ರಮುಖವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಅನುಚಿತ ವರ್ತನೆ ತಡೆಯುವುದರ ಬಗ್ಗೆ ಹೆಚ್ಚು ಒತ್ತು ನೀಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು