Monday, January 20, 2025
ಸುದ್ದಿ

ಅಪಘಾತಕ್ಕೀಡಾದ ಮೋಹನ್ ಭಾಗವತ್ ಬೆಂಗಾವಲು ಪಡೆ ಕಾರು..! – ಕಹಳೆ ನ್ಯೂಸ್

ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಬೆಂಗಾವಲು ಪಡೆಯ ವಾಹನ ಅಪಘಾತಕ್ಕಿಡಾಗಿದೆ. ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ವರೋರಾ ಬಳಿ ಕಾರು ಅಪಘಾತಕ್ಕಿಡಾಗಿದ್ದು 6 ಸಿಆರ್‌ಪಿಎಫ್ ಯೋಧರು ಗಾಯಗೊಂಡಿದ್ದಾರೆ. ಚಂದ್ರಾಪುರ ಹಾಗೂ ನಾಗ್ಪುರ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ವೇಳೆ ಹಸುವೊಂದು ರಸ್ತೆ ಮಧ್ಯೆ ನಿಂತಿತ್ತು. ಈ ವೇಳೆ ಹಸುವಿಗೆ ಡಿಕ್ಕಿ ತಪ್ಪಿಸಲು ಹೋಗಿ ಕಾರು ಅಪಘಾತಕ್ಕೀಡಾಗಿದೆ ಅಂತ ತಿಳಿದು ಬಂದಿದೆ. ಮೋಹನ್ ಭಾಗವತ್ ಪ್ರಯಾಣಿಸುತ್ತಿದ್ದ ಕಾರು ಹಸುವನ್ನು ತಪ್ಪಿಸಿ ಮುಂದೆ ಸಾಗಿದ್ದು, ಅವರ ಕಾರಿನ ಹಿಂದೆ ಬರ್ತಿದ್ದ ಬೆಂಗಾವಲು ಪಡೆ ವಾಹನ ಅಪಘಾತಕ್ಕಿಡಾಗಿದೆ. ಸದ್ಯ ಘಟನೆಯಲ್ಲಿ ಗಾಯಗೊಂಡಿರುವ ಯೋಧರನ್ನು ನಾಗಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು