ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗುರುತು ಖಾಕಿ ಚಡ್ಡಿಯ ರೀತಿಯೇ ನಾಥೂರಾಮ್ ಗೂಡ್ಸೆ ಎಂದು ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ವಿವಾದಾತ್ಮಕ ಹಾಗೂ ಮೊಂಡುತನದ ಹೇಳಿಕೆ ನೀಡಿದ್ದಾರೆ.
ಗಾಂಧಿಯನ್ನು ಕೊಂದ ಗೋಡ್ಸೆ ದೇಶಭಕ್ತ ಎಂದು ಬಿಜೆಪಿ ಅಭ್ಯರ್ಥಿ ಪ್ರಗ್ಯಾಸಿಂಗ್ ಠಾಕೂರ್ ವಿರುದ್ಧ ಬಿಜೆಪಿ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ದೂರಿರುವ ಅಜಂ ಖಾನ್, ಈಗ ಜನ ನಿರ್ಧರಿಸಬೇಕಿದೆ, ನಮ್ಮ ದೇಶ ಗಾಂಧಿ ಜೊತೆ ಅಥವಾ ಗೂಡ್ಸೆ ಜೊತೆ ಗುರುತಿಸಿಕೊಳ್ಳಬೇಕೆ ಎಂಬುದನ್ನು ನಿರ್ಧರಿಸಲಿ, ಮಾನವೀಯತೆ ಅಥವಾ ಖಾಕಿ ಚಡ್ಡಿಯೇ ಎಂಬುದನ್ನು ಜನರೇ ತೀರ್ಮಾನಿಸಬೇಕು ಎಂದು ಹೇಳಿದ್ದಾರೆ.
ಆದರೆ ಈಗ ಆರ್‍ಎಸ್‍ಎಸ್ ಸಮವಸ್ತ್ರದಲ್ಲಿ ಚಡ್ಡಿ ಬದಲು ಪ್ಯಾಂಟ್ ಆಗಿ ಬದಲಾಗಿರುವ ಬಗ್ಗೆ ಅಝಂ ಖಾನ್‍ಗೆ ತಿಳಿಯದೇ ಇರೋದು ಹಾಸ್ಯಾಸ್ಪದ. ಮೊದಲಿನಿಂದಲೂ ಆರ್‍ಎಸ್‍ಎಸ್ ಮಂದಿಯನ್ನು ಚಡ್ಡಿ ಚಡ್ಡಿ ಎಂದೇ ತಮಾಷೆ ಮಾಡುತ್ತಿದ್ದವರಿಗೆ ಈಗ ಆರ್ ಎಸ್ ಎಸ್ ಸಮವಸ್ತ್ರ ಯಾವುದು ಅಂತಾನೆ ಗೊತ್ತಿಲ್ಲ. ಹೀಗಿರುವಾಗ ನಾಥುರಾಮ್ ಯಾರು ದೇಶಭಕ್ತನ ಕೊಲೆಗಾರನ ಎಂಬುದನ್ನು ಇವರು ಹೇಗೆ ತಿಳಿದಾರು??
ನಾಥೂರಾಮ್ ಗೋಡ್ಸೆ ಒಬ್ಬ ದೇಶಭಕ್ತ ಆಗಿದ್ದ. ಆಗಲೂ ಆತ ದೇಶಭಕ್ತ ಮುಂದೆಯೂ ಕೂಡ ಆತ ದೇಶಭಕ್ತನಾಗಿಯೇ ಉಳಿಯುತ್ತಾನೆ ಎಂದು ಸಾದ್ವಿ ಪ್ರಗ್ಯಾ ಸಿಂಗ್ ಹೇಳಿದ್ದರು.
ಗಾಂಧಿ ಕೊಂದ ಗೂಡ್ಸೆ ಬೆಂಬಲಿಗರಿಗೆ ಬಿಜೆಪಿ ಟಿಕೆಟ್ ನೀಡಿದೆ, ಹೀಗಾಗಿ ಅವರನ್ನು ದೇಶದಿಂದ ಹೊರ ಎಸೆಯಬೇಕು ಎಂದು ಹೇಳಿದ್ದಾರೆ.