ಸುಳ್ಯ ನಗರ ಪಂಚಾಯತ್ ಚುನಾವಣೆಯ ನಾಮಪತ್ರ ಸಲ್ಲಿಕೆ ಪೂರ್ಣಗೊಂಡಿದೆ. ಈವರೆಗೆ ಒಟ್ಟು 66 ನಾಮಪತ್ರಗಳು ಸಲ್ಲಿಕೆಯಾಗಿವೆ. ಇಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ, ಸೋಮವಾರ ನಾಮಪತ್ರ ವಾಪಾಸು ಪಡೆಯಲು ಕೊನೆಯ ದಿನವಾಗಿದೆ.
ಇನ್ನು. ದುಗಲಡ್ಕ ವಾರ್ಡ್‍ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಶಶಿಕಲಾ, ಕೊಯಿಕುಳಿ ವಾರ್ಡ್‍ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಶಿಧರ ಎಂ.ಜೆ, ಬಿಜೆಪಿ ಅಭ್ಯರ್ಥಿಯಾಗಿ ಬಾಲಕೃಷ್ಣ ರೈ, ಕೊಯಿಂಗೋಒಡಿ ಕುದ್ಪಾಜೆ ವಾರ್ಡ್‍ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಾಲಕೃಷ್ಣ ಭಟ್, ಜೆಡಿಎಸ್ ಅಭ್ಯರ್ಥಿಯಾಗಿ ಸುರೇಶ್ ಕಾಮತ್, ಶಾಂತಿನಗರ ವಾರ್ಡ್‍ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾರಾಯಣ ಪಿ.ಆರ್., ಸ್ವತಂತ್ರ ಅಭ್ಯರ್ಥಿಯಾಗಿ ಜನಾರ್ದನ, ಹಳೆಗೇಟು ವಾರ್ಡ್‍ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಭವಾನಿಶಂಕರ ಕಲ್ಮಡ್ಕ , ಬಿಜೆಪಿ ಅಭ್ಯರ್ಥಿಯಾಗಿ ಬುದ್ದನಾಯ್ಕ, ಪಕ್ಷೇತರ ಅಭ್ಯರ್ಥಿಯಾಗಿ ಖಲಂದರ್ ನಾಮಪತ್ರ ಸಲ್ಲಿಸಿದರು.
ಬೀರಮಂಗಲ ವಾರ್ಡ್‍ನಲ್ಲಿ ಎಸ್‍ಡಿಪಿಐ ಅಭ್ಯರ್ಥಿಯಾಗಿ ಮಹಮ್ಮದ್ ಮಿರಾಜ್, ಪಕ್ಷೇತರ ಅಭ್ಯರ್ಥಿಯಾಗಿ ಅಬ್ದುಲ್ ರಹಿಮಾನ್ ಮೊಗರ್ಪಣೆ, ಕುರುಂಜಿಭಾಗ್ ವಾರ್ಡ್‍ನ ಬಿಜೆಪಿ ಅಭ್ಯರ್ಥಿಯಾಗಿ ಶೀಲಾವತಿ ಯು.ಬಿ. ನಾಮಪತ್ರ ಸಲ್ಲಿಸಿದರು ಕುರುಂಜಿಗುಡ್ಡೆ ವಾರ್ಡ್‍ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಪೂಜಿತಾ ಶಿವಪ್ರಸಾದ್, ಕಾಂಗ್ರೆಸ್ ಅಭ್ಯರ್ಥಿಯಾಗಿ ಶ್ರೀಲತಾ ಪ್ರಸನ್ನ, ಪುರಭವನ ವಾರ್ಡ್ ಬಿಜೆಪಿ ಅಭ್ಯರ್ಥಿಯಾಗಿ ವಿನಯಕುಮಾರ್ ಕಂದಡ್ಕ, ಪಕ್ಷೇತರ ಅಭ್ಯರ್ಥಿಯಾಗಿ ಸುನಿಲ್‍ಕುಮಾರ್ ಕೇರ್ಪಳ ನಾಮಪತ್ರ ಸಲ್ಲಿಸಿದ್ದಾರೆ.
ಭಸ್ಮಡ್ಕ ವಾರ್ಡ್ ಬಿಜೆಪಿ ಅಭ್ಯರ್ಥಿಯಾಗಿ ಸುಧಾಕರ್, ಕಾಂಗ್ರೆಸ್ ಅಭ್ಯರ್ಥಿಯಾಗಿ ಚಂದ್ರಕುಮಾರ್ ಟಿ., ಕೆರೆಮೂಲೆ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂ. ವೆಂಕಪ್ಪ ಗೌಡ, ಬಿಜೆಪಿ ಅಭ್ಯರ್ಥಿಯಾಗಿ ಲೋಕೇಶ್ ಕೆರೆಮೂಲೆ, ಬೂಡು ವಾರ್ಡ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೋಕುಲ್‍ದಾಸ್, ಬಿಜೆಪಿ ಅಭ್ಯರ್ಥಿಯಾಗಿ ಬೂಡು ರಾಧಾಕೃಷ್ಣ ರೈ, ಪಕ್ಷೇತರ ಅಭ್ಯರ್ಥಿಯಾಗಿ ಮಹಮ್ಮದ್ ರಿಯಾಜ್ ಕಟ್ಟೆಕ್ಕಾರ್ ನಾಮಪತ್ರ ಸಲ್ಲಿಸಿದ್ದಾರೆ.
ಕಲ್ಲುಮುಟ್ಲು ವಾರ್ಡ್ ಬಿಜೆಪಿ ಅಭ್ಯರ್ಥಿಯಾಗಿ ಸುಶೀಲ, ಕಾಂಗ್ರೆಸ್ ಅಭ್ಯರ್ಥಿಯಾಗಿ ಜುಬೈದಾ ಪಿ.ಎ., ಎಸ್‍ಡಿಪಿಐ ಅಭ್ಯರ್ಥಿಗಳಾಗಿ ತೌಸಿಫಾ ಎಂ.ಕೆ., ಜುಹೈದಾ ನಸ್ರಿಯಾ ನಾಮಪತ್ರ ಸಲ್ಲಿಸಿದ್ದಾರೆ. ನಾವೂರು ವಾರ್ಡ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಶರೀಫ್ ಕಂಠಿ, ಬಿಜೆಪಿ ಅಭ್ಯರ್ಥಿಯಾಗಿ ಹರೀಶ್ ಬೂಡುಪನ್ನೆ, ಎಸ್‍ಡಿಪಿಐ ಅಭ್ಯರ್ಥಿಗಳಾಗಿ ಅಬ್ದುಲ್ ಕಲಾಂ ಮತ್ತು ಮಿರಾಝ್ ಪಕ್ಷೇತರ ಅಭ್ಯರ್ಥಿಯಾಗಿ ಅಬ್ದುಲ್ ಮಜೀದ್ ನಾಮಪತ್ರ ಸಲ್ಲಿಸಿದ್ದಾರೆ.
ಕಾಯರ್ತೋಡಿ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಚಂದ್ರಕಲಾ ಎಂ., ಬಿಜೆಪಿ ಅಭ್ಯರ್ಥಿಯಾಗಿ ಪ್ರವಿತಾ, ಎಸ್‍ಡಿಪಿಐ ಅಭ್ಯರ್ಥಿಯಾಗಿ ತೌಸಿಫಾ ಎಂ.ಕೆ. ನಾಮಪತ್ರ ಸಲ್ಲಿಸಿದ್ದಾರೆ. ಜಟ್ಟಿಪಳ್ಳ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರೇಮಲತಾ , ಬಿಜೆಪಿ ಅಭ್ಯರ್ಥಿಯಾಗಿ ವಾಣಿಶ್ರೀ, ಜಯನಗರ ವಾರ್ಡ್‍ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಜೂಲಿಯಾನಾ ಕ್ರಾಸ್ತಾ, ಬಿಜೆಪಿ ಅಭ್ಯರ್ಥಿಯಾಗಿ ಶಿಲ್ಪಾ ಸುದೇವ್, ಪಕ್ಷೇತರ ಅಭ್ಯರ್ಥಿಯಾಗಿ ಮೋಹಿನಿ, ಕಾನತ್ತಿಲ ವಾರ್ಡ್‍ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸರೋಜಿನಿ ಪೆಲ್ತಡ್ಕ, ಕಾಂಗ್ರೆಸ್ ಅಭ್ಯರ್ಥಿಯಾಗಿ ಸವಿತಾ ಸತೀಶ್, ಪಕ್ಷೇತರ ಅಭ್ಯರ್ಥಿಯಾಗಿ ಜಯಂತಿ ಆರ್. ರೈ ನಾಮಪತ್ರ ಸಲ್ಲಿಸಿದ್ದಾರೆ.
ಬೋರುಗುಡ್ಡೆ ವಾರ್ಡ್‍ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಎಂ.ಮುಸ್ತಫಾ, ಬಿಜೆಪಿ ಅಭ್ಯರ್ಥಿಯಾಗಿ ರಂಜಿತ್ ಪೂಜಾರಿ, ಜೆಡಿಎಸ್ ಅಭ್ಯರ್ಥಿಯಾಗಿ ಅಬ್ದುಲ್ ರಹಿಮಾನ್, ಎಸ್‍ಡಿಪಿಐ ಅಭ್ಯರ್ಥಿಯಾಗಿ ಮಹಮ್ಮದ್ ಮುಸ್ತಫಾ, ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಅಬ್ದುಲ್ ರಶೀದ್ ಜಟ್ಟಿಪಳ್ಳ, ಪಕ್ಷೇತರರಾಗಿ ಕೆ.ಎಸ್.ಉಮ್ಮರ್, ಆರ್.ಕೆ.ಮಹಮ್ಮದ್, ಬದ್ರುದ್ದೀನ್, ಮಸೂದ್ ನಾಮಪತ್ರ ಸಲ್ಲಿಸಿದ್ದಾರೆ.