Tuesday, January 21, 2025
ಸುದ್ದಿ

ಸೆಲ್ಫಿ ತಂದ ಸಾವು: ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಕ್ಕು ವೈದ್ಯೆ ಸಾವು – ಕಹಳೆ ನ್ಯೂಸ್

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ, ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಕ್ಕು ವೈದ್ಯೆಯೊಬ್ಬರು ಕೊಚ್ಚಿಹೋದ ಘಟನೆ ಗೋವಾದಲ್ಲಿ ನಡೆದಿದೆ. 25 ವರ್ಷದ ಯುವತಿ ರಮ್ಯಕೃಷ್ಣ ಸಾವನ್ನಪ್ಪಿದ್ದು, ಇವರು ಆಂಧ್ರಪ್ರದೇಶ ಮೂಲದವರೆಂದು ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಮ್ಮ ಮೂವರು ಗೆಳತಿಯರೊಂದಿಗೆ ರಮ್ಯಕೃಷ್ಣ ಗೋವಾ ಬೀಚ್‍ಗೆ ತೆರಳಿದ್ರು. ಈ ವೇಳೆ ಸಮುದ್ರದ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ, ಭಾರಿ ಗಾತ್ರದ ಅಲೆ ಬಂದು ದಡಕ್ಕೆ ಅಪ್ಪಳಿಸಿದ ಪರಿಣಾಮ ಮೂವರು ಕೊಚ್ಚಿಹೋಗಿದ್ದಾರೆ. ಆದ್ರೆ ಇಬ್ಬರು ದಡ ಸೇರಿದ್ರೆ, ರಮ್ಯ ಮಾತ್ರ ವಾಪಸ್ ಬರಲೇ ಇಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಗೆಳತಿಯರು ಸ್ಥಳೀಯರೊಂದಿಗೆ ಸೇರಿಕೊಂಡು ರಮ್ಯಾಳನ್ನು ಹುಡುಕಿದ್ದಾರೆ. ಆದ್ರೆ ಎಲ್ಲೂ ರಮ್ಯಾ ಕಾಣಿಸಿರಲಿಲ್ಲ. ಸ್ವಲ್ಪ ಸಮಯದ ಬಳಿಕ ಅವರ ಮೃತದೇಹ ದಡಕ್ಕೆ ತೇಲಿ ಬಂದಿದೆ.

ಆಂಧ್ರಪ್ರದೇಶ ಕೃಷ್ಣಾ ಜಿಲ್ಲೆಯವರಾದ ರಮ್ಯಾಕೃಷ್ಣ ಎಂಬಿಬಿಎಸ್‍ ಮುಗಿಸಿ, ಕಳೆದ ನಾಲ್ಕು ವರ್ಷಗಳ ಹಿಂದೆ ಗೋವಾದ ಖಾಸಗಿ ಆಸ್ಪತ್ರೆಯಲ್ಲಿ ನಿರ್ವಹಿಸುತ್ತಿದ್ದರು. ಮೊನ್ನೆ ಮಂಗಳವಾರ ಸ್ನೇಹಿತೆಯರ ಜೊತೆ ಬೀಚ್‍ ಗೆ ಹೋದಾಗ ಈ ದುರಂತ ಸಂಭವಿಸಿದೆ.