Monday, January 20, 2025
ಸಿನಿಮಾಸುದ್ದಿ

ಶಾಹಿದ್, ಟೈಗರ್ ಶ್ರಾಫನ್ನು ಹಿಂದಿಕ್ಕಿದ ಯಶ್!!– ಕಹಳೆ ನ್ಯೂಸ್

ಹೌದು. ನಮ್ಮ ರಾಕಿಂಗ್ ಸ್ಟಾರ್ ಯಶ್ ಬಹುತೇಕ ಬಾಲಿವುಡ್ ನಟರನ್ನು ಹಿಂದಿಕ್ಕಿದ್ದಾರೆ  ಅದು ಹೇಗೆ ಅಂದ್ರೆ, ಪ್ರತಿಷ್ಠಿತ ಟೈಮ್ಸ್ ಆಫ್ ಇಂಡಿಯಾ ನಡೆಸಿರುವ ಸಮೀಕ್ಷೆ ಪ್ರಕಾರ ‘ಮೋಸ್ಟ್ ಡಿಸೈರೇಬಲ್ ಮೆನ್ 2019’ನಲ್ಲಿ ಯಶ್ ರೀ ಎಂಟ್ರಿ ಪಡೆದು 14ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೀಗಾಗುವುದಕ್ಕೆ ಕಾರಣ ‘ಕೆಜಿಎಫ್’ ಚಿತ್ರದ ಭರ್ಜರಿ ಯಶಸ್ಸು. ಕೆಜಿಎಫ್ ಬಿಡುಗಡೆಗೆ ಮೊದಲು ಕೇವಲ ಸ್ಯಾಂಡಲ್‍ವುಡ್‍ಗೆ ಮಾತ್ರ ಸ್ಟಾರ್ ನಟನಾಗಿದ್ದ ಯಶ್, ಏಕಕಾಲಕ್ಕೆ ಬರೋಬ್ಬರಿ ಪಂಚ ಭಾಷೆಗಳಲ್ಲಿ ಪ್ರಪಂಚದಾದ್ಯಂತ ತೆರೆಕಂಡು ಊಹೆಗೂ ಮೀರಿ ಕೆಜಿಎಫ್ ಯಶಸ್ಸು ಗಳಿಸಿದ್ದೇ ತಡ, ರಾಕಿಂಗ್ ಸ್ಟಾರ್ ‘ನ್ಯಾಷನಲ್ ಸ್ಟಾರ್’ ಆಗಿ ಬದಲಾದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ‘ಮೋಸ್ಟ್ ಡಿಸೈರೇಬಲ್ ಮೆನ್ 2019’ನಲ್ಲಿ ಅತ್ಯುತ್ತಮ ಸ್ಥಾನ ಗಳಿಸಿರುವುದಲ್ಲದೆ, ಬಾಲಿವುಡ್ ಸ್ಟಾರ್‍ಗಳಾದ ಶಾಹಿದ್ ಕಪೂರ್, ಟೈಗರ್ ಶ್ರಾಫ್, ಅರ್ಜುನ್ ರಾಂಪಾಲ್‍ರನ್ನು ಹಿಂದಿಕ್ಕಿ 14ನೇ ಸ್ಥಾನಿಯಾಗಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.

ಅದೂ ಅಲ್ಲದೆ ಯಶ್ ಆ ಪಟ್ಟಿಯಲ್ಲಿರುವ ಏಕೈಕ ಕನ್ನಡದ ನಟ ಕೂಡ ಹೌದು. ಇನ್ನು ನಂ.1 ಸ್ಥಾನದಲ್ಲಿರುವುದು ‘ಉರಿ’ ಸಿನೆಮಾ ಮೂಲಕ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ ವಿಕ್ಕಿ ಕೌಶಲ್. ಇದೂ ವಿಕ್ಕಿ ಕೌಶಲ್‍ರ ಪ್ರಥಮ ಪ್ರವೇಶದಲ್ಲೇ ಅನ್ನೋದು ವಿಶೇಷ.
ಒಟ್ಟಿನಲ್ಲಿ ಮುಂದಿನ ವರ್ಷ ‘ಕೆಜಿಎಫ್ 2’ ಬಂದ ಮೇಲೆ ಯಶ್ ಅಗ್ರ 5 ಸ್ಥಾನದೊಳಗೆ ಬರುವುದಂತೂ ಖಚಿತ.