Recent Posts

Wednesday, November 20, 2024
ರಾಜಕೀಯಸುದ್ದಿ

ಮೊದಲ ಪತ್ರಿಕಾಗೋಷ್ಟಿಯಲ್ಲಿ ನಮೋ ಮೌನ– ಕಹಳೆ ನ್ಯೂಸ್

ಬೆಂಗಳೂರು, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಮೊದಲ ಬಾರಿಗೆ ಜಂಟಿಯಾಗಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ್ದರು. ತಮ್ಮ ಸರ್ಕಾರದ ಬಗ್ಗೆ ಸ್ವಲ್ಪ ಹೊತ್ತು ಮೋದಿ ಮಾತನಾಡಿದ್ದರು. ಬಳಿಕ ಪತ್ರಕರ್ತರು ಕೇಳಿದ ಯಾವ ಪ್ರಶ್ನೆಗೂ ಅವರು ಉತ್ತರ ನೀಡಿರಲಿಲ್ಲ. ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ನೀಡುವ ಜವಾಬ್ದಾರಿಯನ್ನು ಸಂಪೂರ್ಣವಾಗಿ ಅಮಿತ್ ಶಾ ಅವರಿಗೇ ಬಿಟ್ಟುಕೊಟ್ಟಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕೇಂದ್ರದಲ್ಲಿ ಸರ್ಕಾರ ರಚಿಸಿದ ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ಹೋಗದೆ ಎಲ್ಲವನ್ನೂ ಅಮಿತ್ ಶಾ ಅವರಿಗೆ ಬಿಟ್ಟುಕೊಟ್ಟು ಮೌನ ವಹಿಸಿದ್ದರು.ಇದು ಅವರ ವಿರೋಧಿಗಳಿಗೆ ಹಸಿದ ಹೊಟ್ಟೆಗೆ ಆಹಾರ ಸಿಕ್ಕಂತಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡದ ಮೋದಿ ಅವರ ಕಾಲೆಳೆದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಮಾತ್ರ ಮಾತನಾಡಬೇಕು ಎಂದು ಮೋದಿ ಭಾವಿಸಿಕೊಂಡಿದ್ದಾರೆ. ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಮನೆಯಲ್ಲಿ ಕುಳಿತಾಗ ಅದರ ಬಗ್ಗೆ ಆಲೋಚನೆ ಮಾಡಲು ಸಾಕಷ್ಟು ಸಮಯ ಸಿಗುತ್ತದೆ ಎಂದು ವ್ಯಂಗ್ಯ ಮಾಡಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಮೋದಿ ಅವರನ್ನು ವ್ಯಂಗ್ಯವಾಡಿದ್ದಾರೆ. ಮುಂದಿನ ಬಾರಿ ಒಂದೆರಡು ಪ್ರಶ್ನೆಗಳಿಗೆ ಉತ್ತರ ನೀಡಲು ಅಮಿತ್ ಶಾ ನಿಮಗೆ ಅವಕಾಶ ಕೊಟ್ಟರೂ ಕೊಡಬಹುದು ಎಂದು ರಾಹುಲ್ ಹೇಳಿಕೆ ನೀಡಿದರು