Wednesday, November 20, 2024
ಸುದ್ದಿ

ಕೇದಾರನಾಥನ ಸನ್ನಿಧಿಯಲ್ಲಿ ಪ್ರಧಾನಿಯಿಂದ ರುದ್ರಾಭಿಷೇಕ..!– ಕಹಳೆ ನ್ಯೂಸ್

ಉತ್ತರಖಾಂಡ್: ಇಷ್ಟುದಿನ ಲೋಕಸಭೆ ಚುನಾವಣೆಯಲ್ಲಿ ತೀವ್ರ ಪ್ರಚಾರದಲ್ಲಿ ತೊಡಗಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇದಾರನಾಥ್ ಹಾಗೂ ಬದ್ರಿನಾಥ್ ಪುಣ್ಯಧಾಮಗಳಿಗೆ ಎರಡು ದಿನಗಳ ಆಧ್ಯಾತ್ಮಿಕ ಪ್ರವಾಸ ಕೈಗೊಂಡಿದ್ದಾರೆ. ಇಂದು ಕೇದಾರ್‍ನಾಥ್‍ಗೆ ಬಂದಿಳಿದ ಮೋದಿ, ನಡೆಯುತ್ತಲೇ ದೇವಸ್ಥಾನಕ್ಕೆ ತೆರಳಿದ್ದಾರೆ.

ಇನ್ನು ಕೇದಾರನಾಥ್‍ಗೆ ಬಂದಿಳಿದ ಪ್ರಧಾನಿ, ವಿಶೇಷ ಉಡುಗೆ ಮೂಲಕ ಎಲ್ಲರ ಗಮನಸೆಳೆದ್ರು. ನೇಪಾಳಿ ಶೈಲಿಯಲ್ಲಿ ಉಡುಗೆ ತೊಟ್ಟಿದ್ದ ಪ್ರಧಾನಿ ಮೋದಿ, ಕೈಯಲ್ಲಿ ಊರುಗೋಲು ಹಿಡಿದು ದೇವಾಲಯದತ್ತ ಪ್ರಯಾಣ ಬೆಳೆಸಿದ್ರು. ನಂತರ ಕೇದಾರನಾಥ್ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ರು. ಜೊತೆಗೆ ರುದ್ರಾಭಿಷೇಕ ಕೂಡ ಮಾಡಿದ್ದಾರೆ. ಅಲ್ಲದೇ ಇಂದು ಇಡೀ ದಿನ ಕೇದಾರನಾಥ್ ಧಾಮದಲ್ಲೇ ಇರುವ ಪ್ರಧಾನಿ ಮೋದಿ ಅಲ್ಲಿಯೇ ಧ್ಯಾನ ಕೈಗೊಳ್ಳಲಿದ್ದಾರೆ. ಇನ್ನು ನಾಳೆ ಬದರಿನಾಥ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು