ಪುತ್ತೂರು ಮದ್ರಸ ಶಾಲೆಯೊಂದರ ಅಪ್ರಾಪ್ತ ವಿದ್ಯಾರ್ಥಿಯೋರ್ವರಿಗೆ ಮದ್ರಸ ಗುರು ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಪುತ್ತೂರು ನಗರ ಪೊಲೀಸ್ ಠಾಣೆಗೆ ನೊಂದ ಬಾಲಕ ನೀಡಿದ ದೂರನ್ನ ಪುತ್ತೂರು ಮಹಿಳಾ ಪೊಲೀಸ್ ಠಾಣೆಯವರು ದಾಖಲಿಸಿಕೊಂಡಿದ್ದು ಆರೋಪಿಯನ್ನು ಬಂಧಿಸಿದ್ದಾರೆ.
ಮಾ 3ರಂದು ಸಂಜೆ ಪುರುಷರ ಕಟ್ಟೆ ಮದ್ರಸದ ನೆರೆಯ ವ್ಯಕ್ತಿಯೊಬ್ಬರು ನೊಂದ ವಿದ್ಯಾರ್ಥಿಯ ಮೂಲಕ ಮದ್ರಸದ ಉಸ್ತಾದ್ ಅನ್ವರ್ ಮೌಲವಿಗೆ ಚಹಾ ತಿಂಡಿ ಕೊಡಲು ಹೋದ ವೇಳೆ ಆರೋಪಿ ಉಸ್ತಾದ್ ಮದ್ರಸದ ಬಾಗಿಲು ಹಾಕಿ ಒಳಗಡೆ ವಿದ್ಯಾರ್ಥಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ.
ಇದರಿಂದ ನೊಂದ ಬಾಲಕ ಮದ್ರಸ ಕಲಿಕೆಗೆ ಹೋಗದೆ ಇರುವುದನ್ನು ಗಮನಿಸಿ ತಾಯಿ ಮೇ 16ರಂದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು ಮೇ 17 ರಂದು ಮಗನ ಮೂಲಕ ಪೊಲೀಸರಿಗೆ ದೂರನ್ನು ನೀಡಲಾಗಿದೆ. ಪ್ರಕರಣವನ್ನು ಪುತ್ತೂರು ಮಹಿಳಾ ಪೊಲೀಸರು ದಾಖಲಿಸಿಕೊಂಡಿದ್ದು ಆರೋಪಿಯ ವಿರುದ್ದ ಪೋಸ್ಕೋ ಪ್ರಕರಣದಡಿ 377, 342, ಮತ್ತು ಬೆದರಿಕೆಗೆ ಸಂಬಂಧಿಸಿ 506 ಪ್ರಕರಣ ದಾಖಲಿಸಿಕೊಂಡಿದ್ದಾರೆ.