Tuesday, November 19, 2024
ಸುದ್ದಿ

ಪ್ರೀತಿಸಿದವಳೇ ವಿಷ ಕೊಟ್ಲು..! ಈ ಮಿಸ್ ಯೂ ಅಮ್ಮಾ..! – ಕಹಳೆ ನ್ಯೂಸ್

ಮೈಸೂರು: ಪ್ರೀತಿಸಿದವಳ ಮಾತಿನಿಂದ ಮನನೊಂದು ಸೆಲ್ಫಿ ವಿಡಿಯೋ ಮಾಡಿ ಯುವಕನೊಬ್ಬ ಆತ್ಯಹತ್ಯೆಗೆ ಶರಣಾಗಿರುವ ಘಟನೆ ಕಸುವನಹಳ್ಳಿಯ ಹೊರವಲಯದಲ್ಲಿ ನಡೆದಿದೆ. ಸಿದ್ದರಾಜು ಮೃತ ಯುವಕ. ಕಸುವನಹಳ್ಳಿಯ ಹೊರವಲಯದಲ್ಲಿ ನಿನ್ನೆ ರಾತ್ರಿ ವಿಷ ಸೇವಿಸಿ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಸುವನಹಳ್ಳಿ ಗ್ರಾಮದವನಾದ ಮೃತ ಸಿದ್ದರಾಜು, ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದ.

ಮೇ 16 ರಂದು ತಾನು ಕೆಲಸಕ್ಕೆ ಹೋಗೋದಾಗಿ ಮನೆಯಲ್ಲಿ ಹೇಳಿದ್ದ ಎನ್ನಲಾಗಿದೆ. ನಿನ್ನೆ ಬೆಳಗಿನ ಜಾವ ಮೃತದೇಹ ಕಂಡು ಗ್ರಾಮಸ್ಥರು ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಸಾಯುವ ಮುನ್ನ ಪ್ರೀತಿಸಿದ ಹುಡುಗಿಯ ಫೋಟೋ ತೋರಿಸಿ ಯುವಕ ಸೆಲ್ಫಿ ರೆಕಾರ್ಡ್ ಮಾಡಿರುವುದು ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರೀತಿಸಿದವಳ ಕೈಯಿಂದ ಕೊಟ್ಟ ವಿಷ ತೆಗೆದು ಕೊಳ್ಳುವ ಭಾಗ್ಯ ಯಾರಿಗೆ ತಾನೆ ಸಿಗುತ್ತೆ, ನನಗೆ ಸಿಕ್ಕಿದೆ. ಸಾವಿನ ದಿನಕ್ಕೂ ಮುನ್ನ ಪ್ರೀತಿಸಿದವಳೇ ಝೂಗೆ ನನ್ನನ್ನು ಕರೆದು ವಿಷ ಕೊಟ್ಟಿದ್ದಳು. ನಾನು ವಿಷವನ್ನು ತೆಗೆದುಕೊಳ್ತೇನೆ. ಐ ಮಿಸ್ ಯೂ ಅಮ್ಮಾ, ಐ ಮಿಸ್ ಯೂ ಅಪ್ಪ, ಐ ಮಿಸ್ ಯೂ ಫ್ರೇಂಡ್ಸ್. ನಾನು ನಿಮ್ಮೆಲ್ಲರಿಗೂ ಮೋಸ ಮಾಡ್ತಿದ್ದೀನಿ ಕ್ಷಮಿಸಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ಲೀಸ್ ಪೊಲೀಸ್‍ನವರಿಗೆ ಮಾತ್ರ ನಾನು ಹೇಳೋದಿಷ್ಟೇ, ಅವಳ ಮದುವೆ ನಡೆಯಬಾರದು, ಅವಳಿಗೆ ಶಿಕ್ಷೆಯಾಗಬೇಕು ಎಂದು ಯುವಕ ಆರೋಪಿಸಿ, ಸಾಯುವ ಮುನ್ನ ಸೆಲ್ಫಿ ವಿಡಿಯೋದಲ್ಲಿ ರೆಕಾರ್ಡ್ ಮಾಡಿದ್ದಾನೆ. ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.