ನವದೆಹಲಿ: ದಬಾಂಗ್ ಸ್ಟಾರ್, ಬಾಲಿವುಡ್ ಟೈಗರ್, ಭಾಯಿಜಾನ್, ಬಾಲಿವುಡ್ ಬ್ಯಾಡ್ ಬಾಯ್ ಹೀಗೆ ನಟ ಸಲ್ಮಾನ್ ಖಾನ್ಗೆ ಫ್ಯಾನ್ಸ್ ಪ್ರೀತಿಯಿಂದ ಕರೆಯೋ ಹೆಸರಿಗೇನೂ ಕೊರತೆಯಿಲ್ಲ. 57ನೇ ವಯಸ್ಸಲ್ಲೂ 27ರ ತರುಣರು ನಾಚುವಂತೆ ನಟಿಸೋ ಸಲ್ಲುಮಿಯಾರ, ಸೆನ್ಸ್ ಆಫ್ ಹ್ಯೂಮರ್ ಕೂಡ ಸಖತ್ ಇರುತ್ತೆ.
ನಿನ್ನೆ ನಡೆದಿದ್ದೂ ಕೂಡ ಅದೇ. ಸದ್ಯ ತಾವು ಮತ್ತು ಕತ್ರಿನಾ ಕೈಫ್ ನಟಿಸಿರುವ ಭಾರತ್ ಸಿನಿಮಾದ ಪ್ರಮೋಷನ್ನಲ್ಲಿ ಬಾಲಿವುಡ್ ‘ಬಿಗ್ಬಾಸ್’ ಬ್ಯುಸಿಯಾಗಿದ್ದಾರೆ. ನಿನ್ನೆ ಭಾರತ್ ಸಿನಿಮಾದ ನಾಲ್ಕನೇ ಹಾಡನ್ನು ಚಿತ್ರತಂಡ ರಿಲೀಸ್ ಮಾಡಿತ್ತು. ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ವರದಿಗಾರರೊಬ್ಬರು ನಟಿ ಕತ್ರಿನಾಗೆ ಪ್ರಶ್ನೆ ಕೇಳಲು ಆರಂಭಿಸುತ್ತಾರೆ.
‘ಭಾರತ್ ಸಿನಿಮಾದಲ್ಲಿ ‘ಭಾಯಿಜಾನ್’ (ಸಲ್ಮಾನ್ ಖಾನ್) ಬಗ್ಗೆ..’ ಹೀಗಂತಾ ಪ್ರಶ್ನೆ ಕೇಳಲು ಮುಂದಾಗ್ತಾರೆ. ರಿಪೋರ್ಟರ್ ಪ್ರಶ್ನೆ ಮುಗಿಸುವಷ್ಟರಲ್ಲೇ ಮಧ್ಯಪ್ರವೇಶಿಸಿದ ಸಲ್ಮಾನ್ ಖಾನ್, ನಾನು ಕತ್ರಿನಾಗೆ ಭಾಯಿಜಾನ್ ಅಲ್ಲ ಅಂದ್ರು. ‘ಮೇರಿ ಜಾನ್’ ಎಂದು ಹೇಳಿ ನೆರೆದಿದ್ದವರನ್ನು ಒಮ್ಮೆ ನಗೆಗಡಲಲ್ಲಿ ತೇಲಿಸಿದ್ರು.