Tuesday, November 19, 2024
ಸುದ್ದಿ

ಭಾರತದಲ್ಲಿ ಭೀಕರ ಜಲಕ್ಷಾಮ:ಇತಿಹಾಸದಲ್ಲೇ ಪ್ರಥಮ ಬಾರಿಗೆ ಧರ್ಮಸ್ಥಳ ಕ್ಷೇತ್ರದಲ್ಲಿ ನೀರಿನ ಅಭಾವ– ಕಹಳೆ ನ್ಯೂಸ್

ಬೇಸಿಗೆಯಿಂದಾಗಿ ದೇಶದ ಪ್ರಮುಖ ಜಲಾಶಯಗಳಲ್ಲಿ ಲಭ್ಯವಿರುವ ನೀರಿನ ಮಟ್ಟ ಶೋಚನೀಯವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ನೀರನ್ನು ಹಿತವಾಗಿ, ಮಿತವಾಗಿ ಬಳಸುವಂತೆ ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳಿಗೂ ಕೇಂದ್ರ ಸರ್ಕಾರ ಕಿವಿಮಾತು ಹೇಳಿದೆ.

ಬರದ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಈ ಸೂಚನೆಯುಳ್ಳ ಸಲಹಾ ಪತ್ರವನ್ನು ರವಾನಿಸಿರುವ ಕೇಂದ್ರ ಸರ್ಕಾರ, ಅದರ ಪ್ರತಿಯನ್ನು ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯ ಸರ್ಕಾರಗಳಿಗೂ ಕಳುಹಿಸಿದೆ. ಮುಂಗಾರು ಆರಂಭಗೊಂಡು ಜಲಾಶಯಗಳು ಭರ್ತಿಯಾಗುವವರೆಗೂ ಈಗ ಲಭ್ಯವಿರುವ ನೀರನ್ನು ಕೇವಲ ಕುಡಿಯುವುದಕ್ಕಾಗಿ ಬಳಸುವಂತೆ ಕೇಂದ್ರ ತನ್ನ ಸಲಹೆಯಲ್ಲಿ ಕಟ್ಟುನಿಟ್ಟಾಗಿ ಸೂಚಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೇಸಿಗೆ ಕಾಲದಲ್ಲಿ ಕಳೆದ 10 ವರ್ಷಗಳಿಂದ ಜಲಾಶಯಗಳಲ್ಲಿ ನಿಲ್ಲುತ್ತಿದ್ದ ಸರಾಸರಿ ನೀರಿನ ಮಟ್ಟಕ್ಕಿಂತ ಈ ಬಾರಿ ಶೇ. 20ರಷ್ಟು ಕುಸಿತ ಕಂಡುಬಂದಿರುವುದರಿಂದ ರಾಜ್ಯ ಸರ್ಕಾರಗಳಿಗೆ ಇಂಥದ್ದೊಂದು ಸಲಹೆಯನ್ನು ಕೇಂದ್ರ ರವಾನಿಸಿದೆ.
ಇನ್ನು ಬರದ ನಾಡಲ್ಲದ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳಲ್ಲೂ ಬರದ ಕಾವು ಹೆಚ್ಚಿದ್ದು, ಬಾವಿಗಳೆಲ್ಲ ಸಂಪೂರ್ಣ ಬರಿದಾಗಿದೆ. ನಗರ ಪ್ರದೇಶಗಳಲ್ಲಿ ಜನರು ನೀರಿನ ಟ್ಯಾಂಕರನ್ನೇ ಆಶ್ರಯಿಸಿದ್ದಾರೆ. ಹಳ್ಳಿಗಳಲ್ಲೂ ಜನ ನೀರಿಗಾಗಿ ಕಿಲೋಮೀಟರ್‍ಗಟ್ಟಲೇ ನಡೆದು ನೀರನ್ನು ಹೊತ್ತೊಯ್ಯುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇತಿಹಾಸದಲ್ಲೇ ಪ್ರಥಮ ಬಾರಿಗೆ ಧರ್ಮಸ್ಥಳ ಕ್ಷೇತ್ರದಲ್ಲಿ ನೀರಿನ ಅಭಾವದಿಂದಾಗಿ ಭಕ್ತಾದಿಗಳು ತಮ್ಮ ಪ್ರವಾಸವನ್ನು ಮುಂದೂಡುವಂತೆ ಧರ್ಮಾಧಿಕಾರಿಗಳು ಪತ್ರದ ಮೂಲಕ ಭಕ್ತಾದಿಗಳಿಗೆ ಮನವಿಯನ್ನು ಮಾಡಿದ್ದಾರೆ.
ಒಟ್ಟಿನಲ್ಲಿ ಇರುವ ನೀರನ್ನು ಹಿತವಾಗಿ-ಮಿತವಾಗಿ ಬಳಸಿ, ಮುಂದಿನ ಮಳೆಯ ನೀರನ್ನು ಮಳೆಕೊಯ್ಲು ಮೂಲಕ ಉಳಿಸುವ ಪ್ರಯತ್ನವನ್ನು ಮಾಡೋಣ.