Saturday, November 23, 2024
ಸುದ್ದಿ

ಹೊನ್ನಾವರದಲ್ಲಿ ವಿದ್ಯಾರ್ಥಿನಿಗೆ ಇರಿತ | ಉದ್ವಿಗ್ನ ಸ್ಥಿತಿ 

 

ಹೊನ್ನಾವರ :ಕೋಮು ಘರ್ಷಣೆ,ಪರೇಶ್‌ ಮೇಸ್ತಾ ಹತ್ಯೆ, ಹಿಂಸಾಚಾರದಿಂದ ತೀವ್ರ ಆತಂಕ ಮನೆ ಮಾಡಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ  ದುಷ್ಕರ್ಮಿಗಳು ಶಾಂತಿ ಕಡಡುವ ಯತ್ನ ಮುಂದುವರಿದಿದ್ದು, ಮಾಗೋಡು ಎಂಬಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಇರಿದು ಅಟ್ಟಹಾಸ ಮೆರೆದಿದ್ದಾರೆ. 

ಜಾಹೀರಾತು
ಜಾಹೀರಾತು
ಜಾಹೀರಾತು

ಶಾಲೆಗೆ ತೆರಳುತ್ತಿದ್ದ ಕಾವ್ಯ ಶೇಖರ್‌ ಎಂಬ ವಿದ್ಯಾರ್ಥಿನಿಗೆ ಅನ್ಯಕೋಮಿನ ಇಬ್ಬರು ಯುವಕರು ಇರಿದು  ಹತ್ಯೆಗೈಯಲು ಯತ್ನಿಸಿದ್ದು, ಈ ವೇಳೆ ಆಕೆ ತಪ್ಪಿಸಿಕೊಂಡಿರುವುದಾಗಿ  ವರದಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾವ್ಯಾಳ 2 ಕೈಗಳಿಗೆ ಚೂರಿ  ಇರಿತದ ಗಾಯಗಳಾಗಿದ್ದು, ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಮುಂಜಾಗೃತಾ ಕ್ರಮವಾಗಿ ಹೊನ್ನಾವರದಲ್ಲಿ 24 ಗಂಟೆಗಳ ಕಾಲ ನಿಷೇಧಾಜ್ಞೆ ಜಾರಿ ಗೊಳಿಸಲಾಗಿದ್ದು, ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಸ್ಥಳಕ್ಕೆ ಹೆಚ್ಚುವರಿ ಪಡೆಗಳನ್ನು ಕರೆಸಿಕೊಳ್ಳಲಾಗುತ್ತಿರುವ ಬಗ್ಗೆ ವರದಿಯಾಗಿದೆ.
ಎಸ್‌ಪಿ ವಿನಾಯಕ್‌ ಪಾಟೀಲ್‌ , ಜಿಲ್ಲಾಧಿಕಾರಿ  ನಕುಲ್‌  ಆಸ್ಪತ್ರೆಗೆ ಭೇಟಿ ಕಾವ್ಯಾಳ ಬಳಿ ವಿವರ ಪಡೆದಿದ್ದಾರೆ.  ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ದುಷ್ಕರ್ಮಿಗಳ ಗುರುತಿನ ಬಗ್ಗೆ ಕಾವ್ಯಾ ಬಳಿ ಕೇಳಿದಾಗ ‘ನನಗೆ ಸರಿಯಾಗಿ  ಜ್ಞಾಪಕಕ್ಕೆ ಬರುತ್ತಿಲ್ಲ’ ಎಂದಿರುವುದಾಗಿ  ಡಿಸಿ ನಕುಲ್‌ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.

Leave a Response