ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ನಿನ್ನೆ ಮುಂಗಾರು ಪ್ರವೇಶವಾಗಿದೆ. ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ, ಈ ಬಾರಿ ಕೇರಳಕ್ಕೆ ಜೂನ್ 6ಕ್ಕೆ ಮುಂಗಾರು ಲಗ್ಗೆ ಇಡುವ ನಿರೀಕ್ಷೆಯಿದೆ. ನಂತರದ ಎರಡು ದಿನದಲ್ಲಿ ಕರ್ನಾಟಕದ ಕಡೆ ಮುಂಗಾರು ಮಳೆ ಮುಖ ಮಾಡಲಿದೆ ಎಂದು ಹವಾಮಾನ ಇಲಾಖೆಯ ಕರ್ನಾಟಕದ ನೈಸರ್ಗಿಕ ವಿಕೋಪ ಉಸ್ತುವಾರಿ, ಕೇಂದ್ರದ ಹವಾಮಾನ ವಿಜ್ಞಾನಿ ಗವಾಸ್ಕರ್ ತಿಳಿಸಿದ್ದಾರೆ.
ಮುಂಗಾರು ಮಾರುತ ಜೂನ್ 6ಕ್ಕೆ ಕೇರಳ ಪ್ರವೇಶಿಸಲಿದ್ದು, ಜೂನ್ 8 ಅಥವಾ 9ಕ್ಕೆ ಕರ್ನಾಟಕ ಪ್ರವೇಶಿಸುವ ಸಾಧ್ಯತೆ ಇದೆಯಂತೆ. ಮುಂಗಾರು ಮಾರುತಗಳ ತೀವ್ರತೆ ಹೆಚ್ಚಾಗಿದ್ದರೆ ಕೆಲವೇ ದಿನದಲ್ಲಿ ರಾಜ್ಯದ ಹಲವು ಭಾಗಗಳಿಗೆ ವ್ಯಾಪಿಸುತ್ತದೆ. ಒಂದು ವೇಳೆ ಮಾರುತಗಳ ತೀವ್ರತೆ ಕಡಿಮೆಯಾಗಿದ್ದರೆ ಮುಂಗಾರು ಕರ್ನಾಟಕ ತಲುಪುವಲ್ಲಿ ವಿಳಂಬವಾಗಲಿದೆಯಂತೆ.