Tuesday, January 21, 2025
ಸುದ್ದಿ

ಮದ್ದೂರಿನಲ್ಲಿ ಮರಗಳ್ಳರ ಬಂಧನ – ಕಹಳೆ ನ್ಯೂಸ್

ಮೂವರು ಮರಗಳ್ಳರನ್ನ ಬಂಧಿಸುವಲ್ಲಿ ಮದ್ದೂರು ವಲಯದ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಹೌದು, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮದ್ದೂರು ವಲಯ ಅರಣ್ಯ ವ್ಯಾಪ್ತಿಯಲ್ಲಿ ಬರುವ ಲಕ್ಕಿಪುರ ಕಾಲೋನಿಯ ಮೂವರು ಮರಗಳ್ಳರನ್ನ ಬಂಧಿಸಿದ್ದಾರೆ.

ತಡರಾತ್ರಿ ಸುಮಾರು 11.30ರ ಸಮಯದಲ್ಲಿ ರಾತ್ರಿಪಾಳಿಯ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ಸಮಯದಲ್ಲಿ ವಡಗಟ್ಟೆಯ ಹುಣಸೆಮರದ ಹಳ್ಳದ ಸಮೀಪ ಮರ ಕಟಾವು ಮಾಡುತ್ತಿರುವ ಶಬ್ದವನ್ನು ಕೇಳಿದ ಕೂಡಲೇ ಕಾರ್ಯೋನ್ಮುಖರಾದ ಅರಣ್ಯ ಇಲಾಖೆ ಸಿಬ್ಬಂದಿಗಳಾದ ಗಾರ್ಡ್ ನವೀನ್, ಚಿಕ್ಕರಾಜು, ಚಿಕ್ಕಣ್ಣ, ದೇವಯ್ಯ, ಪ್ರಶಾಂತ್, ಹನುಮಂತು ಎಂಬುವವರು ಆರೋಪಿಗಳನ್ನು ತಮ್ಮ ವಶಕ್ಕೆ ಪಡೆಯಲು ಮುಂದಾದ ಸಮಯದಲ್ಲಿ ಆರೋಪಿಗಳಾದ ಚೆಲುವ, ಕೃಷ್ಣ, ಗಣೇಶ, ಸುರೇಶ, ಬೆಳ್ಳಿ, ಅಜಿತ್ ಎಂಬುವವರು ಪರಾರಿಯಾಗಲು ಯತ್ನಿಸಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಲು ಮುಂದಾದಾಗ ಗಾರ್ಡ್ ನವೀನ್ ಅವರು ಆತ್ಮ ರಕ್ಷಣೆಗೋಸ್ಕರ ಹಾರಿಸಿದ ಗುಂಡು ಆರೋಪಿ ಅಜಿತ್ ಬಲಗಾಲಿಗೆ ತಗುಲಿದಾಗ ಆರೋಪಿಯು ಅಲ್ಲಿಯೇ ಕುಸಿದು ಬಿದ್ದ ನಂತರ ಆರೋಪಿಗಳಾದ ಕೃಷ್ಣ, ಚೆಲುವ, ಗಣೇಶ ಎಂಬ ಮೂವರು ಪರಾರಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿ ಅಜಿತ್ ಗೆ ಗುಂಡ್ಲುಪೇಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಉಳಿದ ಆರೋಪಿಗಳಿಗಾಗಿ ಹುಡುಕಾಟ ಪ್ರಾರಂಭವಾಗಿದ್ದು ಶೀಘ್ರದಲ್ಲೇ ಬಂಧಿಸಲಾಗುವುದು ಎಂಬ ವಿಶ್ವಾಸವನ್ನು ಎ.ಸಿ.ಎಫ್. ನಟರಾಜು ವ್ಯಕ್ತಪಡಿಸಿದ್ದಾರೆ.
ಮದ್ದೂರು ವಲಯದ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ನವೀನಕುಮಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು