ಲೋಕಸಭಾ ಚುನಾವಣೆ ಭಾನುವಾರ ಮುಕ್ತಾಯ ಹಂತ ತಲುಪಿದ್ದು, 7 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದ 59 ಕ್ಷೇತ್ರಗಳಲ್ಲಿ ಭದ್ರತೆಯ ನಡುವೆ ಶಾಂತಿಯುತವಾಗಿ ಬಿರುಸಿನ ಮತದಾನ ನಡೆಯುತ್ತಿದೆ.
ಪ್ರಧಾನಿ ಮೋದಿ ಪ್ರತಿನಿಧಿಸುತ್ತಿರುವ ವಾರಾಣಸಿಯಲ್ಲೂ ಬಿರುಸಿನ ಮತದಾನ ನಡೆಯುತ್ತಿದೆ.
ಉತ್ತರ ಪ್ರದೇಶ ಮತ್ತು ಪಂಜಾಬ್‍ಗಳ ತಲಾ 13 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರು ಗೋರಖ್‍ಪುರ್‍ನಲ್ಲಿ ಹಕ್ಕು ಚಲಾಯಿಸಿದರು. ಬೃಹತ್ ಮತದಾನ ಪ್ರಕ್ರಿಯೆಯ ಭಾಗವಾಗಲು ಸಂತಸವಾಗುತ್ತಿದೆ ಎಂದರು.
ಪಶ್ಚಿಮ ಬಂಗಾಲದ 9,ಮಧ್ಯಪ್ರದೇಶ ಮತ್ತು ಬಿಹಾರಗಳ ತಲಾ 8, ಹಿಮಾಚಲ ಪ್ರದೇಶದ 4, ಝಾಖರ್ಂಡ್ ನ 3, ಚಂಡೀಗಢದ 1 ಕ್ಷೇತ್ರದಲ್ಲೂ ಮತದಾನ ಬಿರುಸಿನಿಂದ ನಡೆಯುತ್ತಿದೆ. ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ.
ಬಿಹಾರ ಸಿಎಂ ನಿತೀಶ್ ಕುಮಾರ್ ಪಾಟ್ನಾದ ರಾಜ್‍ಭವನ್‍ನಲ್ಲಿ ಹಕ್ಕು ಚಲಾಯಿಸಿದರು.